ಕನ್ನಡ ಕತೆಗಳಲ್ಲಿ ‘ಒಳಗೊಳ್ಳುವಿಕೆ ಹಾಗೂ ಐಡೆಂಟಿಟಿಯ’ಚಿತ್ರಣ.
Abstract
ಕನ್ನಡದ ಎಲ್ಲ ಕಾಲಘಟ್ಟದ ಸಣ್ಣಕತೆಗಳಲ್ಲಿ ಧರ್ಮ, ಜಾತಿ ಮತ್ತು ವರ್ಗ ಸಂಬಂಧಿತ ಪ್ರಶ್ನೆಗಳು ಗಂಭೀರ ನೆಲೆಯಲ್ಲಿ ಚರ್ಚೆಗೆ ಒಳಪಡುತ್ತವೆ. ಜಾಗತೀಕರಣ ಕಾಲಘಟ್ಟದ ಕತೆಗಳು ಕೂಡ ಈ ಜಿಜ್ಞಾಸೆಯ ಪರಂಪರೆಯನ್ನು ಮುಂದುವರಿಸಿವೆ. ಹಾಗೆಯೇ ಈ ಕತೆಗಳು ಮುನ್ನೆಲೆಗೆ ತರುವ ಪ್ರಶ್ನೆಗಳು ತನ್ನ ಪೂರ್ವಿಕ ಕಥಾಪರಂಪರೆಯ ಪ್ರಶ್ನೆಗಳಿಗಿಂತ ತಾತ್ವಿಕ ನೆಲೆಯಲ್ಲಿ ಕೊಂಚ ಭಿನ್ನವಾಗಿವೆ ಎನ್ನುವುದು ಗಮನಾರ್ಹ. ಅವುಗಳ ಪೈಕಿ ಎರಡು ಕತೆಗಳನ್ನು ಇಲ್ಲಿ ಗಮನಿಸಬಹುದು. ಅವುಗಳೆಂದರೆ, ಒಂದು ಕವಿ ಸಿದ್ದಲಿಂಗಯ್ಯನವರ ‘ಮತಾಂತರ’ ಕತೆ ಹಾಗೂ ಮಿತ್ರಾ ವೆಂಕಟ್ರಾಜ ರವರ ‘ಅಲ್ಲೇ ಇರು’ ಕತೆ.