ತತ್ವಪದಗಳ ಪರಂಪರೆ ಮತ್ತು ಜಾತಿಯ ಕಲ್ಪನೆ.

Authors

  • D. K. Nataraja
  • Ganga Revaiah S. C.

Abstract

ತತ್ವಪದ, ಭಜನೆಪದ, ತತ್ವ ಮುಂತಾದ ಹೆಸರಿನಿಂದ ಕರೆಯುವ ಅನುಭವ ಸಾಹಿತ್ಯವೊಂದು ಈ ನಾಡಿನ ಉದ್ದಕ್ಕೂ ಈ ನೆಲದ ತಾತ್ವಿಕ ಚಿಂತನೆಯನ್ನು ನಿಸರ್ಗ ವಿವೇಕದ ಜೊತೆ ಬೆರೆಸುತ್ತ ಈ ಸಮಾಜದಲ್ಲಿರುವ ವಿವಿಧ ಜಾತಿ, ಜನಾಂಗ, ಸಮುದಾಯಗಳ ಚಿಂತನಾ ಕ್ರಮವನ್ನು ಉತ್ತಮ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇಲ್ಲಿಯವರೆಗೆ ಸಿಕ್ಕಿರುವ ಬಹುಮುಖ್ಯ ಪ್ರಕಾರವೆಂದರೆ ತತ್ವಪದಗಳು. ಈ ಕನ್ನಡ ನಾಡಿನ ಜೀವಂತ ಪರಂಪರೆಯಾಗಿವೆ. ತತ್ವಪದಕಾರರದ್ದು ಒಂದು ವಿಶಿಷ್ಟ ಭಿನ್ನ ಜೀವನ ಕ್ರಮವೂ ಹೌದು, ಕನ್ನಡನಾಡಿನ ಉದ್ಧಗಲಕ್ಕೂ ಇರುವ ಈ ಪರಂಪರೆಯ ತಾತ್ವಿಕ ಅಭಿವ್ಯಕ್ತಿಯ ವಿಸ್ತಾರವಾದ ಅಧ್ಯಯನವು ಈ ನಾಡಿನ ಜನರ ಬದುಕಿನ ಸ್ಥಿತಿಯನ್ನು ಅರಿತುಕೊಳ್ಳುವ ಮಾರ್ಗವಾಗಿದೆ.

Downloads

Published

05.06.2023

How to Cite

D. K. Nataraja, & Ganga Revaiah S. C. (2023). ತತ್ವಪದಗಳ ಪರಂಪರೆ ಮತ್ತು ಜಾತಿಯ ಕಲ್ಪನೆ. AKSHARASURYA, 2(06), 29–35. Retrieved from http://aksharasurya.com/index.php/latest/article/view/136

Issue

Section

Article