ಜನಪದರ ಒಗಟುಗಳಲ್ಲಿ ಹಾಸ್ಯ.
Abstract
ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಗಟುಗಳು ಸಹ ಒಂದು. ಅಂತರಂಗದಲ್ಲಿ ನಿಜವಾದ ಅರ್ಥ; ಬಹಿರಂಗದಲ್ಲಿ ಲೌಕಿಕ ಅರ್ಥವನ್ನು ಒಳಗೊಂಡಿರುವಂತಹ ಒಗಟುಗಳು ಅತ್ಯಂತ ವಿಶೇಷವಾದವುಗಳಾಗಿವೆ. ಒಗಟುಗಳು ಪುರಾತನ ಮನಸ್ಸಿನ ಪಳೆಯುಳಿಕೆಗಳೇ ಆಗಿದ್ದರಿಂದ ಅವುಗಳ ಅಧ್ಯಯನವೆಂದರೆ ನಿಜಕ್ಕೂ ಒಂದರ್ಥದಲ್ಲಿ ಜನಾಂಗದ ಬದುಕಿನ ಇತಿಹಾಸವೇ ಆಗಿದೆ. ಒಡೆದು ಹೇಳಲು ಒಗಟು ರಚಿತವಾಗಿವೆ. ಇವು ಗೂಢಾರ್ಥದ್ಯೋತಕ. ಒಂದು ವಸ್ತುವನ್ನು ಹೇಳಿ ಮತ್ತೊಂದು ವಸ್ತುವನ್ನು ವರ್ಣಿಸುವುದು ಒಗಟಿನ ರೀತಿ. ಇದರಲ್ಲಿ ಬುದ್ಧಿಯ ಕಸರತ್ತು ತುಂಬಿರುತ್ತದೆ. ಪ್ರಾಸಬದ್ಧವಾಗಿ ಒಗಟನ್ನು ಎಸೆದು ಅದರ ಅರ್ಥ ಬಿಡಿಸಿ ಹೇಳಲು ಕೇಳಿದಾಗ ಆಲೋಚನೆ ಇನ್ನೂ ಲೊಚಗುಟ್ಟುತ್ತಲೇ ಇರುತ್ತದೆ.