ಪಂಪನಲ್ಲಿ ಪ್ರಕೃತಿ.

Authors

  • Vishwanatha

Abstract

ಕನ್ನಡ ಕವಿಗಳಿಗೆ ಕರ್ನಾಟಕವೆಂದರೆ ಬಲುಪ್ರೀತಿ. ಅವರ ನೆನಪಿನಲ್ಲಿರುವುದು ಕನ್ನಡಸೀಮೆ ಅವರು ಎಲ್ಲಿಯೆ ಇರಲಿ, ಒಂದು ತಂಗಾಳಿ ಬೀಸಿದರೂ ಸಾಕು. ಒಂದು ಒಳ್ಳೆ ನುಡಿ ಕಿವಿಗೆ ಬಿದ್ದರೆ, ಇಂಪಾದ ಸಂಗೀತ, ಘಮಘಮಿಸುವ ಒಂದು ಮಲ್ಲಿಗೆ ಬಿರಿಸು ಅರಳಿದರೆ ಸಾಕು, ಅದರಿಂದ ಪ್ರೇಮಸುಖ, ಆನಂದ ಸುಖ ಕವಿಗಾಗುತ್ತದೆ. ಅದ್ದರಿಂದಲೆ ಯಾರು ಅಂಕುಶವಿಟ್ಟರು ಕವಿ ಮನವು ಕರ್ನಾಟಕದ ನೆಲ, ಜಲ, ಭಾಷೆ ಕಡೆ ಮದಿಸಿದ ಆನೆಯಂತೆ ನುಗ್ಗುತ್ತದೆ. ಇಂಪಾದ ಎಲರು, ಸೊಂಪಾದ ಮಲ್ಲಿಗೆ, ಸಂಪಿಗೆವನ, ಸೊಗಸಾದ ಹಾಡು ಕಿವಿಗೆ, ನರ್ತನ ಕಣ್ಣಿಗೆ, ಎಲ್ಲಾ ಸುಖ, ಸಂತಸದ ಸಂಪತ್ತು ಅಲ್ಲಿರುವಾಗ “ತೆಂಕನಾಡನ್ನು ಮರೆಯುವುದಕ್ಕೆ” ಯಾರಿಂದಲೂ ಆಗದು. ಪಂಪನಿಗಂತೂ ಕನ್ನಡ ಪ್ರದೇಶವೆಂದರೆ ಅಚ್ಚುಮೆಚ್ಚು. ಆತನ ತಾಯಿ ಊರು ಧಾರವಾಡದ ಅಣ್ಣೆಗೇರಿ, ಕಾರವಾರದ ಕಡಲು, ವನಸಂಪತ್ತು ಆತನನ್ನು ಆಕರ್ಷಿಸಿದೆ. ಮಲೆನಾಡಿನ ಕುವರ ಪಂಪಕವಿ ಪ್ರಕೃತಿ ಸಂಸತ್ತು ಉಳಿದರೆ ಮಾನವ ಸಂಪತ್ತು ಉಳಿಯುತ್ತದೆ, ಬೆಳೆಯುತ್ತದೆ. ಪ್ರಕೃತಿ ಕುರಿತು ಪಂಪ ಬರೆದಿರುವ ಪದ್ಯಗಳು ಸಕಾಲಿಕ. ಪ್ರಕೃತಿಯೇ ಪರಮ ಆರಾಧನೆ. ಅಷ್ಟು ಸೊಗಸಾಗಿ ಪ್ರಕೃತಿ ವರ್ಣನೆ ಆತನ ಎರಡು ಕಾವ್ಯಗಳಲ್ಲಿ ಚಿತ್ರಿತವಾಗಿದೆ. ಪಂಪ ಕವಿ ಕಂಡ ಆನಂದದ ಬೀಡು ಕರುನಾಡು. ಅದರಲ್ಲಿ ಸಂಸಾರ ಸಾರ ಸರ್ವಸ್ವವನ್ನು ಕಂಡಿದ್ದಾನೆ ಕವಿ.

Downloads

Published

05.06.2023

How to Cite

Vishwanatha. (2023). ಪಂಪನಲ್ಲಿ ಪ್ರಕೃತಿ. AKSHARASURYA, 2(06), 16–20. Retrieved from http://aksharasurya.com/index.php/latest/article/view/134

Issue

Section

Article