ಶೋಷಿತರ ಉದ್ಧಾರಕ್ಕಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳು.
Abstract
ಶಿಕ್ಷಣವಿಲ್ಲದೆ ಸಮಾಜದಲ್ಲಿನ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಸಾಂಪ್ರದಾಯಿಕವಾಗಿ ವಿದ್ಯೆ ಕಲಿಯದೇ ಹೋದರೆ ಮುಂದಿನ ಪೀಳಿಗೆಯನ್ನು ಎಚ್ಚರಿಸಿ ಅರಿವು ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ಅಸ್ಪೃಶ್ಯನು ವಿದ್ಯೆಯನ್ನು ಪಡೆದು ತಮ್ಮ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯ ಎಸೆಗಿ ನೋವು ಕೊಡುತ್ತಿರುವವರ ವಿರುದ್ಧ ತಿರುಗಿ ನಿಲ್ಲದಿದ್ದರೆ ನೋವಿಗೆ ಪರಿಹಾರವಿಲ್ಲ. ಪ್ರತಿಯೊಬ್ಬ ಶೋಷಿತ ಮತ್ತು ಅಸ್ಪೃಶ್ಯನು ‘ಶಿಕ್ಷಣ’, ‘ಸಂಘಟನೆ’, ‘ಹೋರಾಟ’ ಈ ಮೂರು ತತ್ವಗಳಿಂದ ಸಂಘಟಿಕರಾದರೆ ಮಾತ್ರವೇ ಸ್ವ ಉದ್ಧಾರ, ಕುಟುಂಬ ಉದ್ಧಾರ, ಸಮುದಾಯದ ಉದ್ಧಾರ, ರಾಜ್ಯ ಉದ್ಧಾರ, ದೇಶ ಉದ್ಧಾರವಾಗುತ್ತದೆಂಬ ದೃಢಸಂಕಲ್ಪವನ್ನು ಅಂಬೇಡ್ಕರ್‌ರವರು ಹೊಂದಿದ್ದರು. ಅಲ್ಲದೆ ಆಧುನಿಕ ಭಾರತದಲ್ಲಿದ್ದ ಸಮಾಜಿಕ ಪಿಡುಗು ಆಗಿರುವ ಜಾತಿಪದ್ಧತಿಯನ್ನು ಚಳುವಳಿ ಮತ್ತು ಚಿಂತನೆಗಳ ಮೂಲಕ ಹೋಗಲಾಡಿಸಿ ದೇಶದಲ್ಲಿ ಸಮಾನತೆಯನ್ನು ತಂದು ದೇಶಾಭಿವೃದ್ಧಿಗೆ ಪ್ರಯತ್ನಿಸಿದ ಮಹಾನ್ ಸಮಾಜ ಸುಧಾರಕನೆಂಬ ಘನತೆ ಡಾ.ಬಿ .ಆರ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.