ಕರ್ನಾಟಕ ಏಕೀಕರಣದಲ್ಲಿ ಪಾಟೀಲ ಪುಟ್ಟಪ್ಪನವರ ಪಾತ್ರ.
Abstract
ಕನ್ನಡ ಭಾಷೆ ಭರತಖಂಡದ ಹದಿನೈದು ರಾಷ್ಟ್ರೀಯ ಭಾಷೆಗಳಲ್ಲಿ ಒಂದು. ಈ ಭಾಷೆಗಳಲ್ಲಿ ಅತಿ ಪ್ರಾಚೀನವಾದುದು ಸಂಸ್ಕೃತ. ಉಳಿದ ಭಾಷೆಗಳಲ್ಲಿ ತಮಿಳನ್ನು ಬಿಟ್ಟರೆ ಕನ್ನಡವೇ ಅತ್ಯಂತ ಪ್ರಾಚೀನವಾದ ಭಾಷೆ. ತಮಿಳು, ಕನ್ನಡ, ತೆಲಗು, ಮಲಯಾಳಂ, ತುಳು ಈ ಐದು ಭಾಷೆಗಳು ದ್ರಾವಿಡ ಭಾಷೆಗಳೆನಿಸಿಕೊಂಡಿವೆ. ಕರ್ನಾಟಕವು ಪ್ರಾಚೀನ ಕಾಲದಿಂದಲೂ ತನ್ನದೇ ಆದ ಶ್ರೀಮಂತ ಸಂಸ್ಕೃತಿಯನ್ನು ಪಡೆದ ಕಲೆಗಳ ನಾಡು. ಗಂಗರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯಗಳು ವೈಭವದಿಂದ ಆಳಿದ ನಾಡು ನಮ್ಮದು. ಇಮ್ಮಡಿ ಪುಲಕೇಶಿ, ಆರನೇ ವಿಕ್ರಮಾದಿತ್ಯ, ಕೃಷ್ಣದೇವರಾಯರಂತಹ ಚಕ್ರವರ್ತಿಗಳನ್ನು, ಕಿತ್ತೂರು ರಾಣಿಚನ್ನಮ್ಮ, ಬೆಳವಡಿ ಮಲ್ಲಮ್ಮ, ವನಕೆ ಒಬವ್ವರಂತಹ ವೀರ ಮಹಿಳೆಯರನ್ನು; ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ, ಚಾಮರಸ, ಸರ್ವಜ್ಞರಂತಹ ಕವಿಮಹಾಶಯರನ್ನು ಶಂಕರಾಚಾರ್ಯ, ಪುರಂದರದಾಸರು, ಕನಕದಾಸರು, ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣರಂತಹ ಶ್ರೇಷ್ಠ ದಾರ್ಶನಿಕರಿಗೆ ಜನ್ಮ ನೀಡಿದ ಹೆಮ್ಮಯ ನಾಡು ಕರ್ನಾಟಕವಾಗಿದೆ.