ಕನ್ನಡ ರಂಗಗೀತೆಗಳಲ್ಲಿ ಷಟ್ಪದಿ ಸಾಹಿತ್ಯದ ಹೊಸ ಶೋಧ.

Authors

  • MALLAIAH SANDUR

Abstract

ಷಟ್ಪದಿ ದೇಸಿ ಛಂದೋಪ್ರಕಾರ. ಅಂಶ ಛಂದಸ್ಸಿನ ಮಟ್ಟುಗಳನ್ನು ಲಾಕ್ಷಣಿಕರು ‘ಕರ್ಣಾಟಕ ವಿಷಯ ಜಾತಿ’ ಎಂದು ಕರೆದಿದ್ದು, ಇದರಲ್ಲಿ ಷಟ್ಪದಿಯೂ ಒಂದಾಗಿದೆ. ಷಟ್ಪದಿ ಎಂದರೆ ದುಂಬಿಯೆಂದೂ ಆರು ಸಾಲುಗಳುಳ್ಳ ಪದ್ಯವೆಂದೂ ಅರ್ಥವಿದೆ. ಷಟ್ಪದಿಯ ಮೊದಲ ಮೂರು ಚರಣಗಳಿಗೆ ‘ಪೂವಾರ್ಧ’ವೆಂದೂ ಮುಂದಿನ ಮೂರು ಚರಣಗಳಿಗೆ ‘ಉತ್ತರಾರ್ಧ’ವೆಂದೂ ಕರೆಯುವರು. ಪೂವಾರ್ಧದಲ್ಲಿರುವಷ್ಟು ಮಾತ್ರೆಗಳು, ಗಣಗಳು ಉತ್ತರಾರ್ಧದಲ್ಲಿರುವುದರಿಂದ ಷಟ್ಪದಿ ಪದ್ಯವು ‘ಅರ್ಧಸಮ ಮಾತ್ರಾವೃತ್ತ’ ಎಂದು ಕರೆಯುತ್ತಾರೆ. ಇದರಲ್ಲಿ ಮೊದಲನೇ, ಎರಡನೇ, ನಾಲ್ಕನೇ ಮತ್ತು ಐದನೇ ಪಾದಗಳು ಸಮನಾಗಿರುತ್ತವೆ. ಮೂರು ಮತ್ತು ಆರನೇ ಪಾದಗಳು ದೊಡ್ಡವಿದ್ದು, ಸಮನಾಗಿರುತ್ತವೆ. ಈ ಎರಡು ಸಾಲುಗಳ ಅಂತ್ಯದಲ್ಲಿ ಗುರು ಕಡ್ಡಾಯವಿರುತ್ತದೆ ಅಥವಾ ಲಘುವಿದ್ದರೂ ಅದು ಗುರು ಎನಿಸುತ್ತದೆ. ಕನ್ನಡ ಸಾಹಿತ್ಯದ ಆಧುನಿಕ ಪೂರ್ವಕವಿಗಳಲ್ಲಿ ಒಬ್ಬನಾದ ರಾಘವಾಂಕ ತನ್ನ ಕೃತಿಗಳಲ್ಲಿ ಮೊದಲ ಬಾರಿಗೆ ಷಟ್ಪದಿಗಳನ್ನೇ ಪ್ರಧಾನ ಛಂದಸ್ಸಾಗಿ ಬಳಸಿದನು. ಷಟ್ಪದಿಯಲ್ಲಿ ಶರ, ಕುಸುಮ ಭೋಗ ಭಾಮಿನಿ ಪರಿವರ್ಧಿನಿ ಮತ್ತು ವಾರ್ಧಕ ಎಂಬ ಆರು ಪ್ರಭೇದಗಳಿವೆ. ರಾಘವಾಂಕ ತನ್ನ ‘ವೀರೇಶ ಚರಿತೆ’ಯಲ್ಲಿ ಹೊಸದಾದ ಒಂದು ಷಟ್ಪದಿಯನ್ನು ಬಳಸಿದನು. ಅದುವೇ ಉದ್ದಂಡ ಷಟ್ಪದಿ. ಷಟ್ಪದಿ ಪ್ರಯೋಗದಲ್ಲಿ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ ಕೃತಿಯು ಮುಖ್ಯವಾಗಿದೆ.

Downloads

Published

05.05.2023

How to Cite

MALLAIAH SANDUR. (2023). ಕನ್ನಡ ರಂಗಗೀತೆಗಳಲ್ಲಿ ಷಟ್ಪದಿ ಸಾಹಿತ್ಯದ ಹೊಸ ಶೋಧ. AKSHARASURYA, 2(05), 123–133. Retrieved from http://aksharasurya.com/index.php/latest/article/view/125

Issue

Section

Article