ಸಾರಾ ಅವರ ‘ಸಹನಾ’ ಕಾದಂಬರಿಯ ಕುರಿತು ಒಂದು ವಿಮರ್ಶಾತ್ಮಕ ನೋಟ.
Abstract
ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ದಲಿತ ಬಂಡಾಯ, ಮುಸ್ಲಿಂ ಸಂವೇದನೆಯ ರಚನೆಗಳು ಕಾಣಿಸಿಕೊಂಡಿವೆ. ಕರಾವಳಿ ಭಾಗದ ಮುಸ್ಲಿಂ ಬರೆಹಗಾರ್ತಿ ನಾಡೋಜ ಡಾ. ಸಾರಾ ಅಬೂಬಕ್ಕರ್ ಅವರ ಹೆಸರು ಸಾಹಿತ್ಯ ವಲಯದಲ್ಲಿ ಚಿರಪರಿಚಿತ. ಮೂಲಭೂತವಾದಿ ಕಟ್ಟುಪಾಡಿಗೆ ಸಿಲುಕಿ ನರಳುವ ತನ್ನ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಅವಕಾಶವಿಲ್ಲದೇ ದುಃಖಿಸುವ ಹೆಣ್ಣುಮಕ್ಕಳ ಜೀವನವನ್ನು ಓದುಗರಿಗೆ ಕನಿಕರ ಹುಟ್ಟುವಂತೆ ನಿರೂಪಿಸುವಲ್ಲಿ ಸಾರಾ ಯಶಸ್ವಿಯಾಗಿದ್ದಾರೆ.