ಸಮಾಜ ಸಂಸ್ಕೃತಿಯಲ್ಲಿ ಎಂ. ಅಕಬರ ಅಲಿ.
Abstract
ಎಂ. ಅಕಬರ ಅಲಿ, ಸಮಾಜದ ಅಂಕು-ಡೊಂಕುಗಳನ್ನು ಸಾತ್ವಿಕವಾಗಿ ಮತ್ತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಕವನಗಳಲ್ಲಿ ಕಂಡುಬರುವ ಸಮಾಜ-ಸಂಸ್ಕೃತಿ ಪರಸ್ಪರ ಪೂರಕ ಪೋಷಕಗಳಾಗಿವೆ. ಒಂದು ಸಂಸ್ಕೃತಿಯ ಶಾಬ್ಧಿಕ ಹಾಗೂ ಕ್ರೀಯಾತ್ಮಕ ಬಗೆಗಳನ್ನು ನೇರವಾಗಿ, ಸರಳವಾಗಿ ಹೇಳದೆ ಸಂಕೇತ, ಪ್ರತಿಮೆ ಪ್ರತೀಕಗಳ ಮೂಲಕ ಹೇಳುವ ಮತ್ತು ಅದರಿಂದಾಗಿ ಅರ್ಥವಂತಿಕೆಯನ್ನು, ಧ್ವನಿಯನ್ನು ಕಡೆದಿಟ್ಟು ಕಾವ್ಯ ಪ್ರಪಂಚದಲ್ಲಿ ತನ್ನದೇ ಆದ ನೆಲೆಯನ್ನು ಮಂಡಿಸುವ ಪ್ರಯತ್ನವನ್ನ ಕಾಣಬಹುದು ಸಾಮಾಜಿಕ ವಾಸ್ತವವನ್ನೇ ತಮ್ಮ ಪ್ರಧಾನ ಕಾಳಜಿಯನ್ನಾಗಿಟ್ಟುಕೊಂಡು ಅಲಿ ಭಾವ್ಯೋದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.