ಇತಿಹಾಸದ ಆಕರ ಸಾಮಗ್ರಿಯಾಗಿ ಐತಿಹಾಸಿಕ ಲಾವಣಿಗಳು.
Abstract
ಒಂದು ರಾಷ್ಟ್ರದ ಇತಿಹಾಸವನ್ನು ನಿರ್ಮಿಸಬೇಕಾದರೆ ಆ ರಾಷ್ಟ್ರದಲ್ಲಿ ದೊರೆಯುವ ಶಾಸನ, ಸ್ಮಾರಕಗಳು, ಸಾಹಿತ್ಯಿಕ ಆಧಾರಗಳು ಆಕರ ಸಾಮಗ್ರಿಗಳಾಗುವಂತೆ, ಸಾಮಾನ್ಯ ಜನರ ನಾಲಿಗೆಯ ಮೇಲೆ ಹರಿದಾಡುವ ಜನಪದ ಹಾಡುಗಳು ಆಧಾರವಾಗಬಲ್ಲವು. ಅದಕ್ಕೆ ಈ ಐತಿಹಾಸಿಕ ಲಾವಣಿಗಳೇ ಸಾಕ್ಷಿ. ಇವು ನಿಜವಾಗಿಯೂ ಆಯಾ ಕಾಲಗಟ್ಟದಲ್ಲಿ ಬರುವ ಐತಿಹಾಸಿಕ ವೀರರ ಮತ್ತು ಘಟನೆಗಳ ಸಾಂಸ್ಕೃತಿಕ ಜೀವನ ಚಿತ್ರಣ ನೀಡುವ ಪಳೆಯುಳಿಕೆಗಳಾಗಿರುತ್ತವೆ. ಇವು ಜನರಿಗೆ ಹತ್ತಿರವಾದ ಮತ್ತು ಆಯಾ ಘಟನೆಗಳು ಜರೂಗಿ ಕೆಲವೇ ಕಾಲದಲ್ಲಿ ರಚನೆಗೊಂಡಿರುವದರಿಂದ ನಿಖರ ಮಾಹಿತಿ ನೀಡಬಲ್ಲವೆಂದು ಇತ್ತೀಚಿಗೆ ವಿದ್ವಾಂಸರು ಗುರುತಿಸಿದ್ದಾರೆ. ಆ ಕಾರಣ ಇತರ ಆಕರ ಸಾಮಗ್ರಿಗಳಂತೆ ಜಾನಪದವೂ ಒಂದು ಪ್ರಮುಖ ಆಕರ ಸಾಮಗ್ರಿಯಾಗಿ ಪರಿಗಣಿಸಲಾಗುತ್ತಿದೆ.