ಕಲ್ಲಂಬಾಳಿನ ‘ಕಲಿಯುಗ ಕಾಮೇಶ್ವರ’ ದೇವಾಲಯದ ಶಾಸನಗಳು.
Abstract
ಇತಿಹಾಸದ ಪ್ರಮಾಣಭೂತವಾದ ಪುನರ್ ನಿರ್ಮಾಣಕ್ಕೆ ಇರುವ ಅತಿ ಪ್ರಮುಖವಾದ ಆಧಾರಗಳೆಂದರೆ ಶಾಸನಗಳು. ಕನ್ನಡ ಸಾಹಿತ್ಯ, ಕಲಾಕೃತಿಗಳು, ನಾಣ್ಯಗಳು, ವಿದೇಶಿಯಾತ್ರಿಕರ ವರದಿಗಳು, ಉತ್ಖನನಗಳು ಇವೆಲ್ಲವೂ ಸಹಾಯಕವಾದರೂ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಪರಂಪರೆಯನ್ನು ತಿಳಿಯುವಂತಾದುದು ಶಾಸನಗಳಿಂದಲೆ ಇತರ ಆಧಾರಗಳು ತುಂಬಿಕೊಡಲಾರದ ಕೆಲವು ಅಂಶಗಳನ್ನು ಇಲ್ಲಿನ ಶಾಸನ ಸಂಪತ್ತು ಒದಗಿಸಿಕೊಟ್ಟಿತು. ಕಲ್ಲಂಬಾಳಿನ ಕಾಮೇಶ್ವರ ದೇವಾಲಯದ ಬಳಿ ಕೆಲವು ಶಾಸನಗಳು ಕಂಡು ಬರುತ್ತವೆ. ಇವು ಊರಿನ ಐತಿಹಾಸಿಕ ಹಿನ್ನಲೆ ಮತ್ತು ದೇವಾಲಯದ ಪ್ರಾಚೀನತೆ ತಿಳಿಸುತ್ತದೆ. ಕಲ್ಲಂಬಾಳಿನ ಶಾಸನಗಳ ಅಧ್ಯಯನಕ್ಕೂ ಮುಂಚೆ ಶಾಸನಗಳ ಅರ್ಥ ಮತ್ತು ಮಹತ್ವ ತಿಳಿಯುವುದು ಅವಶ್ಯವೆಂದೆನಿಸುತ್ತದೆ.