ರಂಗಭೂಮಿ ಮತ್ತು ಚಳುವಳಿ.

Authors

  • RAVINDRA K. V.

Abstract

ಮಾನವನು ಒಂದು ಕಡೆ ನೆಲೆ ನಿಂತು ಕೃಷಿಯನ್ನು ಅವಲಂಬಿಸಿ ಜೀವನವನ್ನು ಸಾಗಿಸಲು ಪ್ರಯತ್ನಿಸಿದ ನಂತರ ತನ್ನ ದಣಿವು ಮತ್ತು ಆಯಾಸವನ್ನು ಮರೆಯಲು ರಾತ್ರಿ ಸಮಯದಲ್ಲಿ ಹಾಡುಗಳನ್ನು ಹಾಡುವುದರ ಜೊತೆಗೆ ನಾಟಕಗಳನ್ನು ಅಭಿನಯಿಸುತ್ತಿದ್ದರು. ಮಾನವನು ತನ್ನ ಸುತ್ತಮುತ್ತಲಿನ ಜನರ ಜೊತೆ ಸಂಬಂಧವನ್ನು ಬೆಸೆಯಲು ಹಾಗೂ ತನ್ನ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು ದೇವಾಲಯಗಳನ್ನು ಕಟ್ಟಿಸಿದ್ದಲ್ಲದೆ ಜಾತ್ರೆ ಮತ್ತು ಆಚರಣೆಗಳನ್ನು ಧರ್ಮ ಹಾಗೂ ಜಾತಿಯ ಹಿನ್ನೆಲೆಯಲ್ಲಿ ರೂಢಿಸಿಕೊಂಡರು. ಆಚರಣೆಯ ಸಂದರ್ಭದಲ್ಲಿ ರಾಮಾಯಣ ಮತ್ತು ಮಹಾಭಾರತಗಳ ಜೊತೆಗೆ ಸ್ಥಳೀಯ ವ್ಯಕ್ತಿ ಪುರಾಣಗಳನ್ನು ದೈವೀಕರಿಸಿ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ರಂಗಭೂಮಿಯನ್ನು ರೂಪಿಸಿಕೊಂಡರು. “ರಂಗಭೂಮಿ ಎಂದರೆ ಕಥಾ ವಸ್ತುವೊಂದನ್ನು ಆಯ್ಕೆ ಮಾಡಿಕೊಂಡು ಮಾನವರು ಕಥೆಯಲ್ಲಿನ ಪಾತ್ರಗಳ ಸನ್ನಿವೇಶಗಳಿಗೆ ಧಕ್ಕೆಯಾಗದಂತೆ ವೇಷಭೂಷಣಗಳನ್ನು ಧರಿಸಿ ರಾತ್ರಿ ಪೂರ್ತಿ ಅಭಿನಯಿಸಲು ರೂಪಿಸಿಕೊಂಡ ವೇದಿಕೆಯೇ ರಂಗಭೂಮಿ”. ರಂಗಭೂಮಿ ಅನ್ಯಜ್ಞಾನ ಶಿಸ್ತುಗಳೊಂದಿಗೆ ಸಂಬಂಧವನ್ನು ಬೆಸೆದುಕೊಂಡಿದೆ. ಆಧುನಿಕತೆ ಮತ್ತು ನಗರೀಕರಣ ಅಭಿವೃದ್ಧಿಯಾದಂತೆ ರಂಗಭೂಮಿಯು ಸಹ ವಿವಿಧ ಆಯಾಮಗಳಲ್ಲಿ ರೂಪಾಂತರಗೊಂಡಿದೆ. ವಸಾಹತುಶಾಹಿಗಳು ಭಾರತಕ್ಕೆ ಆಗಮಿಸಿ ತಮ್ಮ ಆಡಳಿತವನ್ನು ಪ್ರಾರಂಭಿಸಿದ ನಂತರ ರಂಗಭೂಮಿಯು ಕವಲೊಡೆದು ಬೀದಿನಾಟಕಗಳಾಗಿ ಮರು ರೂಪಾಂತರಗೊಂಡಿವು.

Downloads

Published

05.04.2023

How to Cite

RAVINDRA K. V. (2023). ರಂಗಭೂಮಿ ಮತ್ತು ಚಳುವಳಿ. AKSHARASURYA, 2(04), 46–48. Retrieved from http://aksharasurya.com/index.php/latest/article/view/105

Issue

Section

Article