ಕನ್ನಡ ಸಾಹಿತ್ಯದಲ್ಲಿ ಮನುಷ್ಯ ಮತ್ತು ಮಾನವತ್ವ.
Abstract
ಇದಿರಿಗೆ ನಿಂತ ಸೋದರನನ್ನು, ಗುರುಗಳನ್ನು, ಮಾವಂದಿರನ್ನು, ತಾತ ಮುಂತಾದ ಹಿರಿಯರನ್ನು ಹೇಗೆ ಕೊಲ್ಲಲಿ? ಎಂದು ಕಂಗಾಲಾಗಿ ನಿಂತ ಅರ್ಜುನನ್ನು ಅವರನ್ನೆಲ್ಲ ಕೊಲ್ಲಲು ಹುರಿದುಂಬಿಸುತ್ತಿರುವ ಕೃಷ್ಣನ ಚಿತ್ರ ಇನ್ನೊಂದು ಯುದ್ಧವೆನ್ನುವುದು ರಾಜರ ನಡುವಿನದ್ದು ಅದಕ್ಕೆ ಸಾಮಾನ್ಯರನ್ನು ಏಕೆ ಕೊಲ್ಲಬೇಕು ಎಂದು ತಾವಿಬ್ಬರೇ ಹೋರಾಡಿ ಕಡೆಗೆ ತಮ್ಮನೇ ಅಣ್ಣನನ್ನು ಸೋಲಿಸಿ ಸಾಮ್ರಾಜ್ಯಶಾಹಿ ಪ್ರವೃತ್ತಿಯ ಮೂರ್ತರೂಪವನ್ನು ಅನಾಮತ್ತು ಮೇಲೆತ್ತಿ ಆಚೆಗೆ ಬಗೆಯಬೇಕು. ಅಷ್ಟರಲ್ಲಿ ತಾನು ಮಾಡುತ್ತಿರುವುದೇನು ಸ್ವಂತ ಅಣ್ಣನನ್ನು ಲೋಕದೆದುರಿಗೆ ಅಪಮಾನಿಸಿ ಅವನ ಬದುಕನ್ನು ಅಪಮಾನಿಸುದೆ ಅದು ಯಾತಕ್ಕಾಗಿ? ಹೀಗೆ ಬಗೆದ ನಂತರ ತಾನೇ ಅವನಾಗುವುದಿಲ್ಲವೇ? ಇದೇನು ಮಾಡಿ ಬಿಡುತ್ತಿದ್ದೆ ಎಂದು ಕಸಿವಿಸಿಪಟ್ಟು ಎತ್ತಿದ ಭರತನನ್ನು ಹಾಗೆಯೇ ಮೆಲ್ಲಗೆ ಕೇಳಗಿಳಿಸಿ ಎಲ್ಲ ಕೇಡಿನ ಮೂಲ ಅಧಿಕಾರ ಮತ್ತು ದುರಾಸೆಯೇ ಎಂಬುದನ್ನು ತಾನು ಅರಿತು ಲೋಕವೂ ಅರಿವಂತೆ ಮಾಡಿದ ಬಾಹುಬಲಿಯ ಚಿತ್ರ ಮನುಷ್ಯ ದೇವರಾಗಿರುವ ಚಿತ್ರವನ್ನು ಕಾಣಲಾಗುತ್ತದೆ. ಮನುಷ್ಯ ಮಾನವನಾಗುವುದು ನಾಗರೀಕತೆಯ ವಿಕಾಸ ಕ್ರಮ ಎಂದು ಹೇಳುತ್ತೇವೆ. ಮನುಷ್ಯನಾಗಿಯೇ ಉಳಿಯಬೇಕಾದ ತುರ್ತು ಪ್ರಸ್ತುತ ಕಾಲಘಟ್ಟಕ್ಕೆ ಅವಶ್ಯಕವಾಗಿದೆ. ಮನುಷ್ಯ ಮಾನವತ್ವ ಗಳಿಸಿಕೊಂಡರೆ ಮಾತ್ರ ಇತರ ಪ್ರಾಣಿಗಳಿಗಿಂತ ಶ್ರೇಷ್ಟನಾಗುತ್ತಾನೆ. ಇಲ್ಲದಿದ್ದರೆ ಅವನೊಬ್ಬ ಪ್ರಾಣಿಯಷ್ಟೇ.