ಸಂಗಂ ಸಾಹಿತ್ಯ-ನಟ್ರಿಣೈ ಕೃತಿಯ ವಾಸ್ತವತೆಯ ಪರಿ
Keywords:
ಅಗಂ, ಆಂತರಿಕ, ಪುರಂ, ಬಾಹ್ಯ, ನಲ್, ಅಲರ್ದವು, ಕಾಮಕ್ಕಿಳತ್ತಿ, ಕಾಮನಾಯಕಿAbstract
ಸಂಗಂ ಸಾಹಿತ್ಯವು ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿ ಪ್ರಾಚೀನತೆಯ ದೃಷ್ಟಿಯಿಂದ ಪ್ರಮುಖ ಹಾಗೂ ಅದ್ವಿತೀಯವಾಗಿದೆ. (ಅಗಂ) ಆಂತರಿಕ (ಪುಱಂ) ಬಾಹ್ಯ ವಿಷಯಗಳಿಗೆ ಸಂಬಂಧಿಸಿದಂತೆ ರಚಿತವಾಗಿರುವ ಈ ಕಾವ್ಯ (ಹಾಡು)ಗಳನ್ನು ಆ ಕಾಲದಲ್ಲಿದ್ದ ವಿವಿಧ ಕವಿಗಳು ತೊಲ್ಕಾಪ್ಪಿಯಂ ಕೃತಿಯಲ್ಲಿ ಸೂಚಿಸಿದ ನಿಯಮಗಳಿಗನುಸಾರವಾಗಿ ರಚಿಸಿದ್ದಾರೆ. ಪ್ರೇಮ, ವಿರಹ, ಕಾತುರ, ರಸಿಕತೆ, ದಾನಧರ್ಮ, ವೀರ, ಶೌರ್ಯ, ಮುಂತಾದ ವಿಷಯಗಳನ್ನೊಳಗೊಂಡಿವೆ.
ಸಂಗಂ ಕಾವ್ಯಗಳೆಲ್ಲ ಮನುಷ್ಯನನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾಗಿವೆ. ಎರಡು ಸಾವಿರ ವರ್ಷಗಳ ಹಿಂದೆ ನಾಗರಿಕತೆಯ ಪ್ರಭಾವ ಅಷ್ಟಾಗಿ ಇಲ್ಲದ ಪ್ರಾರಂಭ ಕಾಲದಲ್ಲಿ ಹಸಿವು, ಕಾಮ, ವಿರಹ, ನಿಯಮ, ದಾನ, ಧರ್ಮ, ಮಾನವೀಯತೆ ಹಾಗೂ ಜೀವನವನ್ನು ಕಂಡ ಅನುಭವಿಸಿದ, ಅರಿತುಕೊಂಡ ವಿಚಾರಗಳೊಂದಿಗೆ ಆತನ ಕಲ್ಪನೆ, ಜೀವನ ಪ್ರೀತಿ, ಶ್ರದ್ಧೆ ಇರುವುದನ್ನು ಕಾಣಬಹುದು.
ನಟ್ರಿಣೈ-ಕಾವ್ಯ ಸಂಕಲನದಲ್ಲಿ ಹಲವು ನಾಟಕೀಯ ಸನ್ನಿವೇಶಗಳಿಂದ ಕೂಡಿ ಅಭಿನಯಾತ್ಮಕ ರೂಪದಲ್ಲಿ ಬಂದಿವೆ. ಇಲ್ಲಿನ ಹಾಡುಗಳನ್ನು ಅರ್ಥೈಸಿಕೊಳ್ಳಬೇಕಾದರೆ ಇಲ್ಲಿನ ದೃಶ್ಯ, ಸನ್ನಿವೇಶಗಳನ್ನು ಗ್ರಹಿಸಬೇಕಾದರೆ ಸಂಭಾಷಿಸುವವರನ್ನು ಕುರಿತು ಸಂಭಾಷಿಸುವ ಸಂದರ್ಭವನ್ನು ಕುರಿತು ಸಹೃದಯನಿಗೆ ಪೂರ್ವಭಾವಿ ಅನುಭವವಿದ್ದಾಗ ಮಾತ್ರ ಕಾವ್ಯಭಾಗವನ್ನು ಚೆನ್ನಾಗಿ ಗ್ರಹಿಸಬಹುದು.
ನಟ್ರಿಣೈ ಕೃತಿಯ ಕೆಲವು ಹಾಡುಗಳ ಸವಿಯನ್ನು ಆಸ್ವಾದಿಸುತ್ತಲೇ ಅನೇಕ ಸಾಮಾಜಿಕ ಹಾಗೂ ತಾತ್ವಿಕ ಸಂಗತಿಗಳನ್ನು ಅರಿತುಕೊಳ್ಳಲು ಎಡೆ ಮಾಡಿ ಕೊಡುತ್ತದೆ.
(ನವಣೆ ಕೊಯ್ಯಲಿಕ್ಕೆ ಮುಂಚೆ ನಲ್ಲೆ ಮತ್ತು ಗೆಳತಿ ಕಾವಲಿಗೆ ಬರುವ ವಾಡಿಕೆಯುಂಟು)
ಹಾಡು 90ರಲ್ಲಿ ಅನ್ನದ ಗಂಜಿಯಲ್ಲಿ ರಾತ್ರಿಯ ಹೊತ್ತು ಬಟ್ಟೆಗಳನ್ನು ನೆನೆಸಿಡುವ ಅಗಸಗಿತ್ತಿಯ ಪ್ರಸ್ತಾಪ ಬರುತ್ತದೆ. ಹಾಡು 99 ರಲ್ಲಿ ಅಕಾಲದಲ್ಲಿ ಮಳೆಬರುವ ಪ್ರಸಂಗದ ಅದ್ಭುತ ವರ್ಣನೆಗೆ ನಿದರ್ಶನ.
‘‘ಅರಿವಿಲ್ಲದುದರಿಂ ಅಲರ್ದವು ಪಲವುಂ’’
ಇಲ್ಲಿಯ ಹಾಡಿನ ಸೊಗಸು ಏನೆಂದರೆ ನಲ್ಲ ಅಥವಾ ನಾಯಕ ಧನಾರ್ಜನೆಗೆ ಹೋದವನುಕಾರ್ಗಾಲದಲ್ಲಿ ಬರುವೆನೆಂದು ತಿಳಿಸಿ ಹೋಗಿರುತ್ತಾನೆ. ಆದರೆ ಹೇಳಿದಂತಹ ಋತು ಆಗಮಿಸಿ ನಲ್ಲ ಇನ್ನೂ ಬಾರದಿದ್ದಾಗ ನಲ್ಲೆಗೆ ವಿರಹ ವೇದನೆ ಉಂಟಾಗಿ ಬೇಸರದಲ್ಲಿದ್ದಾಗ ಈ ಸುಮಗಳು ಅರಿವಿಲ್ಲದೆ ಅರಳಿ ನಿಂತಿವೆ. ಎಂದು ಗೆಳತಿ ನಲ್ಲೆಗೆ ಸಾಂತ್ವನವನ್ನು ತಿಳಿಸುತ್ತಾಳೆ.
ಹೀಗೆ ನಟ್ರಿಣೈ ಕೃತಿಯಲ್ಲಿ ಸಾಂಸ್ಕೃತಿಕ, ಸಾಮಾಜಿಕ ಸಂಗತಿಗಳು ಹೇರಳವಾಗಿ ದೊರಕುತ್ತವೆ. ಹೀಗೆ ಈ ಕಾವ್ಯಗಳ ಪರಿ ಅದ್ಭುತವಾಗಿ ಚಿತ್ರಿತವಾಗಿದೆ.
References
ಪಿನ್ನತ್ತೂರ್ ನಾರಾಯಣ ಸ್ವಾಮಿ ಅಯ್ಯರ್, ಪೋ. ವೇ ಸೋಮಸುಂದರನಾರ್ ಉರೈ (ವ್ಯಾಖ್ಯಾನ), (1972), ನಟ್ರಿಣೈ ಮೂಲಮುಂ ಉರೈಯುಂ, ಕಳಗ ಪ್ರಕಾಶಬ, ಚೆನ್ನೈ.
ಕೃಷ್ಣ ಮೂರ್ತಿ ತಾ. & ಮಲರ್ ವಿಳಿ ಕೆ., (2021), ನಟ್ರಿಣೈ, ಶಾಸ್ತ್ರೀಯ ತಮಿಳು ಭಾಷಾ ಕೇಂದ್ರೀಯ ಸಂಸ್ಥೆ, ಚೆನ್ನೈ.
Downloads
Published
How to Cite
Issue
Section
License
Copyright (c) 2025 ಅಕ್ಷರಸೂರ್ಯ (AKSHARASURYA)

This work is licensed under a Creative Commons Attribution 4.0 International License.