ನಲ್ಲೂರರ ʼನೀನೆಂಬ ನಾನುʼ ಕವನ ಸಂಕಲನದ ವಿಭಿನ್ನ ನೆಲೆಗಳು

Authors

  • ಉಮೇಶ್ ಬಿ. ಆರ್. ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹಾರೋಹಳ್ಳಿ.

Keywords:

ಧನಾತ್ಮಕ, ಜನಾನುರಾಗಿ, ತುಡಿತ, ಆಧುನಿಕತೆ, ಹೊನ್ನಶೂಲ, ಪ್ರಶ್ನಾರ್ಥಕ, ಮನೋಭಾವ

Abstract

ಆಧುನಿಕ ಕನ್ನಡ ಸಾಹಿತಿಗಳಲ್ಲಿ ಆರ್.ಕೆ.ನಲ್ಲೂರು ಪ್ರಸಾದ್‌ರವರು ಒಬ್ಬರು. ಯಾವುದೇ ಒಂದು ಸಾಹಿತ್ಯಿಕ ಪಂಥಕ್ಕೆ ಸೀಮಿತರಾಗದ ಇವರು ಸಮನ್ವಯತೆಯಿಂದ ಕಾವ್ಯ ಕಟ್ಟುತ್ತಿರುವವರು. ಇವರು ಕವಿಯಾಗಿ, ಜಾನಪದ ವಿದ್ವಾಂಸರಾಗಿ, ಕಲಾವಿದರಾಗಿ, ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ, ವಿಚಾರವಾದಿಯಾಗಿ, ಸಂಸ್ಕೃತಿ ಚಿಂತಕರಾಗಿ, ಲೇಖಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಸಾಹಿತಿಯಾದವನಿಗೆ ತಾನು ಬದುಕುತ್ತಿರುವ ಸಮಾಜದ ಬಗ್ಗೆ ಸದಾಕಾಲ ಕೃತಜ್ಞತಾ ಭಾವವೇ ಇರುತ್ತದೆ. ಸಮಾಜದ ಪ್ರತಿಯೊಂದು ಆಗು-ಹೋಗುಗಳನ್ನು ಆತ ಸದಾ ತೆರೆದ ಹೃದಯದಿಂದ ಸ್ವೀಕರಿಸಿ, ಅನುಭವಿಸಿ ಅವುಗಳಿಗೆ ಅಭಿವ್ಯಕ್ತಿಸುತ್ತಾ ಬದುಕುತ್ತಾನೆ. ಅವನ ಅಭಿವ್ಯಕ್ತಿಯು ಮೌಖಿಕವಾಗಿ ಇಲ್ಲವೇ ಕಾರ್ಯರೂಪದಲ್ಲಿ ಅಭಿವ್ಯಕ್ತಿಸಲ್ಪಡುತ್ತದೆ. ಸಾಹಿತಿಯು ತಾನು ಕಂಡುಂಡ ಅನೇಕ ಘಟನೆಗಳಿಗೆ ಪ್ರತಿಕ್ರಿಯಿಸುತ್ತಲೇ ಇರುತ್ತಾನಾದರೂ ಆತನ ಕಾವ್ಯ ರಚನೆಗೆೆ ಪ್ರೇರಣೆ, ಪ್ರಭಾವಗಳಿರುವುದನ್ನು ಅಲ್ಲಗಳೆಯಲಾಗದು. ಈ ನಿಟ್ಟಿನಲ್ಲಿ ನಲ್ಲೂರರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ʼದಗ್ಧ, ಸೋನೆ ಮುಗಿಲು, ನೀನೆಂಬ ನಾನು, ರೆಕ್ಕೆ ಬಡಿಯುವ ಮುನ್ನ ಹಾಗೂ ನಿವೃತ್ತೋಪನಿಷತ್ತುʼ ಎಂಬ ಕವನ ಸಂಕಲನಗಳು ಸಹ ಮುಖ್ಯವಾದವುಗಳಾಗಿವೆ. ಈ ಎಲ್ಲಾ ಕವನ ಸಂಕಲನಗಳಲ್ಲಿ ಕಾವ್ಯ, ಸಮಾಜ, ಸಂಬಂಧಗಳು, ಸಾಹಿತ್ಯ, ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ವಿಚಾರಗಳ ಒಳನೋಟಗಳನ್ನು ತೆರೆದಿಟ್ಟಿದ್ದಾರೆ. ಪ್ರಸ್ತುತ ಲೇಖನದಲ್ಲಿ ಇವರ ಪ್ರಥಮ ಕವನ ಸಂಕಲನವಾದ ʼನೀನೆಂಬ ನಾನುʼ ಕೃತಿಯಲ್ಲಿರುವ ಕವನಗಳಲ್ಲಿ ಅಭಿವ್ಯಕ್ತವಾಗಿರುವ ವಿಭಿನ್ನ ನೆಲೆಗಳನ್ನು ಅವಲೋಕಿಸಲಾಗಿದೆ.

References

ಚಂದ್ರಪ್ಪ ಎನ್. (ಸಂ), (2010), ನಿಕಷ: ಭೂತದಿಂದ ಭವಿಷ್ಯದೆಡೆಗೆ ಸಾಗಿದ ನಲ್ಲೂರು ಪ್ರಸಾದ್‌ರವರ ಕಾವ್ಯ, ಮುಂಡ ಪ್ರಕಾಶನ, ಬೆಂಗಳೂರು.

ನಲ್ಲೂರು ಪ್ರಸಾದ್, (1977), ನೀನೆಂಬ ನಾನು, ಕೃಷಿ ಪ್ರಕಾಶನ, ಚನ್ನರಾಯಪಟ್ಟಣ.

Downloads

Published

02.02.2025

How to Cite

ಉಮೇಶ್ ಬಿ. ಆರ್. (2025). ನಲ್ಲೂರರ ʼನೀನೆಂಬ ನಾನುʼ ಕವನ ಸಂಕಲನದ ವಿಭಿನ್ನ ನೆಲೆಗಳು. ಅಕ್ಷರಸೂರ್ಯ (AKSHARASURYA), 5(06), 92 to 104. Retrieved from https://aksharasurya.com/index.php/latest/article/view/596

Issue

Section

ಪುಸ್ತಕ ವಿಮರ್ಶೆ. | BOOK REVIEW.