ಮೇಹರ್‌ಜಾನ್‌‌ಳ ದುರಂತ ಪ್ರೇಮಕಥೆ

Authors

  • ಯಲ್ಲಮ್ಮ ಕೆ. ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಜಿ.ವಿ.ಪಿ.ಪಿ. ಸ.ಪ್ರ.ದ. ಕಾಲೇಜು, ವಿಜಯನಗರ ಜಿಲ್ಲೆ.

Keywords:

ಮಂಜಿಕೆ, ಕಾಫಿರ್, ನಿಮಂತ್ರಣ, ಜನಾನ್‌ಖಾನೆ, ಯವನ, ಗೋಮು

Abstract

ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಮೆಚ್ಚಿನ ಪತ್ನಿ ʼಮಮ್ತಾಜ್ ಮಹಲ್ʼಳ ನೆನಪಿಗಾಗಿ ಕಟ್ಟಿಸಿದ ʼತಾಜ್ ಮಹಲ್ʼ ಪ್ರೇಮಸೌಧ, ಹಾಗೂ ಮುಹಮ್ಮದ್ ಆದಿಲ್‌ಷಾನು ತನ್ನ ʼರಂಭಾʼ ಎನ್ನುವ ದಾಸಿಯ ಮೇಲಿನ ಉತ್ಕಟ ಪ್ರೀತಿಯ ಕುರುಹಾಗಿ ʼಗೋಲ್ ಗುಂಬಜ್ʼ ಸ್ಮಾರಕ ಲೋಕವಿಖ್ಯಾತಿಯನ್ನು ಪಡೆದಿರುವಂತೆ; ʼಮೆಹರ್‌ಜಾನ್ʼಳ ದುರಂತ ಪ್ರೇಮಕತೆಯು ದಕ್ಷಿಣ ಭಾರತದ ಬಹುದೊಡ್ಡದೆನಿಸಿದ ವಿಜಯನಗರ ಸಾಮ್ರಾಜ್ಯದ ಅವನತಿಯ ಹಿನ್ನಲೆಯ ಮುಖ್ಯ ಕಾರ್ಯಕಾರಣ ಸಂಬಂಧವನ್ನು ತಿಳಿಯುವುದು.


ರಾಮರಾಯನ ಪ್ರೇಮ ನಿವೇದನೆಯನ್ನು ನಿಷ್ಕಲ್ಮಶ ಜೀವ-ಭಾವದಿ ಒಪ್ಪಿ-ಅಪ್ಪಿ, ಒಲಿದು ಬಂದ ಹೆಣ್ಣಿಗೆ ಪ್ರೀತಿಯ ರಸದೂಟವನ್ನುಣಬಡಿಸಿ ಒಡಲು ಮಡಿಲು ತುಂಬಿಸಿ, ಕೃಷ್ಣದೇವರಾಯನ ಮೆಚ್ಚುಗೆ, ರಾಣಿ ತಿರುಮಲಾಂಬಳೊಂದಿಗೆ ವಿವಾಹ, ಸಿಂಹಾಸನದ ಮೇಲಿನ ವ್ಯಾಮೋಹ ಇದೆಲ್ಲವನ್ನೂ ಮಹತ್ವಾಕಾಂಕ್ಷೆಯ ಸೋಗಿನಲ್ಲಿ ನಂಬಿ ಬಂದ ಹೆಣ್ಣಿನ ಪ್ರೀತಿಯನ್ನು ತುಚ್ಯವಾಗಿ ಕಂಡದ್ದರ ಫಲವಾಗಿ ಮುಂದೊಂದು ದಿನ ರಾಮರಾಯ ಬಹುದೊಡ್ಡ ಬೆಲೆಯನ್ನಲ್ಲದೆ ತನ್ನ ತಲೆಯನ್ನೇ ಕೊಡಬೇಕಾದ ಅನಿವಾರ್ಯತೆ ತಂದುಕೊಳ್ಳುತ್ತಾನೆ; ಇಲ್ಲಿ ವ್ಯಕ್ತಿ, ವ್ಯಕ್ತಿತ್ವ ಅಧಃಪತನವೂ ಒಂದು ಮಹೋನ್ನತ ಸಾಮ್ರಾಜ್ಯದ ಪತನಕ್ಕೆ ಕಾರಣವಾಗುವುದಲ್ಲದೆ, ಆತ್ಮಾಭಿಮಾನದ ಬಲದ ಗೆಲುವಾಗುತ್ತದೆ. ʼಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿʼ ಎನ್ನುವ ಅರ್ಥದಿ ʼಪುರುಷನ ಏಳ್ಗೆಗೂ ಬೀಳ್ಗೆಗೂ ಕಾರಣಳುʼ ಆಗಬಲ್ಲಳು ಎಂಬುದಕ್ಕೆ ಮೆಹರ್‌ಜಾನ್‌ಳ ದುರಂತ ಪ್ರೇಮಕತೆ ಸ್ಪಷ್ಟ ನಿದರ್ಶನವಾಗಿದೆ.

References

ಪಂಡಿತ ಗಳಗನಾಥರು, (2011), ಕನ್ನಡಿಗರ ಕರ್ಮಕಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಸಂಕ್ಷಿಪ್ತ ಕನ್ನಡ ನಿಘಂಟು, (1975), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

Downloads

Published

02.02.2025

How to Cite

ಯಲ್ಲಮ್ಮ ಕೆ. (2025). ಮೇಹರ್‌ಜಾನ್‌‌ಳ ದುರಂತ ಪ್ರೇಮಕಥೆ. ಅಕ್ಷರಸೂರ್ಯ (AKSHARASURYA), 5(06), 28 to 40. Retrieved from https://aksharasurya.com/index.php/latest/article/view/591

Issue

Section

ಸಂಶೋಧನಾ ಲೇಖನಗಳು. | RESEARCH ARTICLE.