ಆಫ್ರಿಕನ್ ಮತ್ತು ಕನ್ನಡ ಸಾಹಿತ್ಯದಲ್ಲಿ ವಸಾಹತುಶಾಹಿ ಸಂಘರ್ಷದ ನೆಲೆಗಳು
Keywords:
ನೈಜೀರಿಯಾ, ವಸಾಹತುಶಾಹಿ, ಇತಿಹಾಸ, ಆಫ್ರಿಕಾ, ಭಾರತ, ಜಾಗತೀಕರಣ, ಮುಕ್ತ ಮಾರುಕಟ್ಟೆAbstract
ಯಾವುದೇ ʼಅನ್ಯ ಆಡಳಿತ ಸಂಸ್ಥೆʼ ಅಥವಾ ʼಅನ್ಯ ಸಂಸ್ಕೃತಿʼ ಹಲವು ವರ್ಷಗಳ ಕಾಲ ದೇಸೀ ಸಮಾಜವನ್ನು ಪ್ರಭಾವಿಸಿ, ಹಲವು ಸುಧಾರಣೆಗಳಿಗೆ ಹಾಗೂ ವಿಘಟನೆಗಳಿಗೆ ಕಾರಣವಾಗಿ ತದನಂತರ ಆ ಸಮಾಜದಿಂದ ಹೊರಟಿದೆ ಎಂದ ಮಾತ್ರಕ್ಕೆ ಆ ದೇಶವು ಮೂಲಸಂಸ್ಕೃತಿಗೆ ಬಂದಿತೆಂದಾಗಲಿ, ಅನ್ಯತೆಯಿಂದ ಮುಕ್ತವಾಯಿತೆಂದಾಗಲಿ ಗೆರೆಯೆಳೆದು ಹೇಳಲು ಬರುವುದಿಲ್ಲ. ಏಕೆಂದರೆ ಇದುವರೆವಿಗೂ ಪಶ್ಚಿಮ ಕಟ್ಟಿಕೊಟ್ಟ ಆಡಳಿತ, ಶಿಕ್ಷಣ, ನ್ಯಾಯ, ಅಧಿಕಾರ ಮತ್ತು ಬೌದ್ಧಿಕ ಚಿಂತನ ಕ್ರಮಗಳು ಸ್ಥಳೀಯ ನಂಬಿಕೆ, ಆಡಳಿತ ವ್ಯವಸ್ಥೆ, ಬದುಕು, ಸಂಬಂಧ, ಕಸುಬುಗಳನ್ನು ಪ್ರಭಾವಿಸಿರುತ್ತವೆ. ಆ ಮೂಲಕ ದೇಸೀ ಸಮಾಜದ ಭೌತಿಕ ಹಾಗೂ ಬೌದ್ಧಿಕ ರಚನೆಯೊಳಗೆ ʼಸಾಂಸ್ಕೃತಿಕ ಅನನ್ಯತೆʼಯನ್ನು ಸ್ವೀಕರಿಸುವ, ನಿರಾಕರಿಸುವ ಮತ್ತು ಅನುಸಂಧಾನ ಮಾಡಿಕೊಳ್ಳುವ ಹಂತಗಳಲ್ಲಿ ಸಂಘರ್ಷವನ್ನ ಏರ್ಪಡಿಸುತ್ತಿರುತ್ತದೆ. ಬ್ರಿಟೀಷ್ ವಸಾಹತುಶಾಹಿಯ ರಾಜಕೀಯ ಆಡಳಿತದಿಂದ ಬಿಡುಗಡೆಗೊಂಡ ಭಾರತೀಯ ಸಮಾಜದ ಪರಿಸ್ಥಿತಿ ಕೂಡ ಇದೆ ಆಗಿದೆ.
ವಸಾಹತು ರಾಷ್ಟ್ರಗಳನ್ನು ಆಳುವ ಉದ್ದೇಶದಿಂದ ವಸಾಹತುಶಾಹಿ ರಾಷ್ಟ್ರ ಕಟ್ಟಿಕೊಂಡಿದ್ದ ಹಲಬಗೆಯ ಸಂಕಥನಗಳಿಗೆ ಪರ್ಯಾಯವನ್ನು ಹುಡುಕುವ ಸಂದರ್ಭದಲ್ಲಿ ಉತ್ತರವಾದಗಳು ಹೆಚ್ಚು ಪ್ರಚಾರಕ್ಕೆ ಬರುತ್ತವೆ. ತೃತೀಯ ರಾಷ್ಟ್ರಗಳನ್ನು ಆಳಲು ವಸಾಹತುಶಾಹಿ ನಿರ್ಮಿಸಿ ಅನುಸರಿಸಿದ ʼಜ್ಞಾನʼ ಮತ್ತು ʼಅಧಿಕಾರʼ ಎಂಬ ಪರಿಕಲ್ಪನೆಗಳನ್ನು ವಿಕೇಂದ್ರೀಕರಿಸುವುದೇ ಇವುಗಳ ಮೂಲ ಆಶಯ. ವಸಾಹತುಶಾಹಿಗೆ ಬದಲನ್ನು ಹುಡುಕಿದ ವಸಾಹತೋತ್ತರವಾಗಲಿ, ಆಧುನಿಕತೆಯನ್ನು ವಿರೋಧಿಸಿದ ಆಧುನಿಕೋತ್ತರವಾಗಲಿ, ಕೇಂದ್ರ ಕಟ್ಟಿದ ಚರಿತ್ರೆಯನ್ನು ಅನುಮಾನಿಸಿದ ಸಬಾಲ್ಟ್ರನ್ ಅಧ್ಯಯನವಾಗಲಿ ಸಾಂರಾಜ್ಯಶಾಹಿಗೆ ಪರ್ಯಾಯವಾಗಿ ಅಂಚಿನ ಸಮುದಾಯವನ್ನು ಪ್ರಧಾನವಾಗಿಸಿದವು. ಹಾಗಾಗಿ ಈ ಪರಿಕಲ್ಪನೆಗಳು ವಸಾಹತುಶಾಹಿಯು ಕಟ್ಟಿಕೊಟ್ಟ ಅಧಿಕಾರ ಮತ್ತು ಜ್ಞಾನಕ್ಕೆ ಉತ್ತರವೆಂಬಂತೆ ವಿಜ್ಞಾನವನ್ನು ಅನುಮಾನಿಸಿ, ಜನಪ್ರಿಯ ಹಾಗೂ ಗಂಭೀರ ಎಂಬ ವರ್ಗೀಕರಣವನ್ನು ವಿರೋಧಿಸುತ್ತವೆ.
References
ನಾಗಣ್ಣ ಸಿ., (2008), ಭಂಗ, ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರ, ಮಂಡ್ಯ.
ಶ್ರೀನಿವಾಸ ವಿ. ಸುತ್ರಾವೆ, (2004), ಸಿಂಹ ಮತ್ತು ರತ್ನ, ಕಾವ್ಯಾಲಯ ಪ್ರಕಾಶನ, ಜಯನಗರ.
ನಟರಾಜ್ ಹುಳಿಯಾರ್, (2011), ಗಾಳಿ ಬೆಳಕು, ಪಲ್ಲವ ಪ್ರಕಾಶನ, ಬಳ್ಳಾರಿ.
ಚಂದ್ರಶೇಖರ ಕಂಬಾರ, (2015), ಶಿವನ ಡಂಗುರ, ಅಂಕಿತ ಪುಸ್ತಕ, ಬೆಂಗಳೂರು.
ಬಸವರಾಜ ಕಲ್ಗುಡಿ, (2012), ಕಂಬಾರರ ಸಾಹಿತ್ಯದ ನೆಲೆ ಬೆಲೆ, ಅಂಕಿತ ಪುಸ್ತಕ, ಬೆಂಗಳೂರು.
ನಾಯಕ ಜಿ.ಎಚ್., (2015), ಕೊನೆಯ ದಾರಿ (ಕನ್ನಡ ಸಣ್ಣ ಕತೆಗಳು), ನ್ಯಾಷನಲ್ ಬುಕ್ ಟ್ರಸ್ಟ್, ದೆಹಲಿ.
Downloads
Published
How to Cite
Issue
Section
License
Copyright (c) 2025 AKSHARASURYA

This work is licensed under a Creative Commons Attribution 4.0 International License.