ಪರಿಪೂರ್ಣತೆಯ ಭ್ರಮೆ ಕಳಚುವ ಕಂಬಾರರ ಸಿರಿಸಂಪಿಗೆ

Authors

  • ಎಂ. ಎನ್. ಅರ್ಚನ ತೇಜಸ್ವಿ ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶೇಷಾದ್ರಿಪುರಂ ಕಾಲೇಜು, ಬೆಂಗಳೂರು.

Keywords:

ಸಿರಿಸಂಪಿಗೆ, ಶಿವನಾಗದೇವ, ದೀಪದ ಮೊಲ್ಲೆ, ದೇಹ, ಮನಸ್ಸು, ಆತ್ಮ, ಪರಿಪೂರ್ಣತೆ, ದ್ವಂದ್ವ

Abstract

ಚಂದ್ರಶೇಖರ ಕಂಬಾರರ ʼಸಿರಿಸಂಪಿಗೆʼ ಹಾಗು ಗಿರೀಶ್ ಕಾರ್ನಾಡರ ʼನಾಗಮಂಡಲʼ-ಈ ಎರಡೂ ಕೃತಿಗಳಿಗೂ ಎ.ಕೆ. ರಾಮಾನುಜನ್ ಅವರು ಹೇಳಿದ ಒಂದು ಜಾನಪದ ಕತೆಯೇ ಆಧಾರ. ನಾಗಮಂಡಲ ಓದಿದ ನನಗೆ, ಇದೇ ಕತೆಯನ್ನು ಕಂಬಾರರು ಹೇಗೆ ಬಳಸಿಕೊಂಡಿದ್ದಾರೆ ಎಂದು ತಿಳಿಯುವ ಕುತೂಹಲವಿತ್ತು.ಕಂಬಾರರು ಈ ಕತೆಯನ್ನು ಕಟ್ಟಿಕೊಡುವ ಪರಿ ಸಂಪೂರ್ಣ ಭಿನ್ನ.

ಜಾನಪದವನ್ನು ಬಹಳ ಶಕ್ತಿಯುತವಾಗಿ ಬಳಸಿಕೊಳ್ಳುವ ಕಂಬಾರರು ಈ ನಾಟಕಕ್ಕೆ ಯಕ್ಷಗಾನ ರಂಗ ಪ್ರಕಾರವನ್ನು ಬಳಸಿಕೊಂಡಿರುವುದು ಇನ್ನೊಂದು ವಿಶೇಷ. ಈ ವಿಶೇಷತೆಯನ್ನು ಮತ್ತಷ್ಟು ವಿವರವಾಗಿ ಅರಿಯುವ ಉದ್ದೇಶವೂ ನನ್ನ ಲೇಖನ ರಚನೆಯ ಹಲವು ಕಾರಣಗಳಲ್ಲಿ ಒಂದು. ಇನ್ನು ನನ್ನ ಸಂಶೋಧನಾ ಲೇಖನದ ಮುಖ್ಯ ಉದ್ದೇಶ, ಇಂದಿಗೂ ಮನುಷ್ಯನನ್ನು ಕಾಡುವ ಹಲವು ಪ್ರಶ್ನೆಗಳಿಗೆ ಕಂಬಾರರ ʼಸಿರಿಸಂಪಿಗೆʼ ಉತ್ತರ ನೀಡುತ್ತದೆಯೇ ಎಂದು ಅರಿಯುವ ಅದಮ್ಯ ಆಸಕ್ತಿ. ದೇಹ-ಆತ್ಮ, ಕಾಮ-ಪ್ರೇಮ, ವಾಸ್ತವ-ಆದರ್ಶ ಈ ದ್ವಂದ್ವಗಳು ಮನುಷ್ಯನನ್ನು ತಲ್ಲಣಗಳಿಗೆ ನೂಕುತ್ತಲೇ ಇರುತ್ತವೆ. ಈ ದ್ವಂದ್ವಗಳನ್ನು ಸಿರಿಸಂಪಿಗೆ ಚರ್ಚಿಸಿರುವ ರೀತಿ ಬಹಳ ವಿಶಿಷ್ಟವಾಗಿದೆ. ದೇಹವಿಲ್ಲದೆ ಆತ್ಮವಿಲ್ಲ, ಕಾಮ-ಪ್ರೇಮ ಇವೆರಡೂ, ಒಂದು ಇನ್ನೊಂದಕ್ಕೆ ಪೂರಕವಾಗಬೇಕು ಎನ್ನುವ ಸತ್ಯ ಹಾಗೂ ವಾಸ್ತವ-ಆದರ್ಶಗಳ ನಡುವಿರುವ ಗೆರೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿರುವ ಅಗತ್ಯ, ಸದಾ ಪರಿಪೂರ್ಣತೆಯೆಡೆಗೆ ತುಡಿಯುವ ನಾವು, ಅದೊಂದು ಭ್ರಮೆಯೆಂಬುದನ್ನು ಮನಗಾಣಬೇಕಾಗಿರುವ ಅವಶ್ಯಕತೆ - ಇವೆಲ್ಲವುಗಳಿಗೆ ʼಸಿರಿಸಂಪಿಗೆʼ ಉತ್ತರವೆನಿಸುತ್ತದೆ. ಆ ಉತ್ತರವನ್ನು ಕಂಡುಕೊಳ್ಳುವ, ಕಾಣಿಸುವ ಪ್ರಯತ್ನವೇ ನನ್ನ ಲೇಖನ ʼಪರಿಪೂರ್ಣತೆಯ ಭ್ರಮೆ ಕಳಚುವ ಕಂಬಾರರ ಸಿರಿಸಂಪಿಗೆ.ʼ

References

ಚಂದ್ರಶೇಖರ ಕಂಬಾರ, (1995), ಸಿರಿಸಂಪಿಗೆ, ಅಕ್ಷರ ಪ್ರಕಾಶನ, ಹೆಗ್ಗೋಡು.

ಆಮೂರ ಜಿ.ಎಸ್., ಸಾತ್ವಿಕ ಪಥ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ಜಯಪ್ರಕಾಶ ಮಾವಿನಕುಳಿ (ಸಂ.), (2004), ಶಿವಾಪುರ ಕಂಬಾರ, ಚಂದ್ರಶೇಖರ ಕಂಬಾರ ಅಭಿನಂದನಾ ಸಮಿತಿ, ಮುಡುಬಿದಿರೆ.

ನಾಯಕ ಹಾ.ಮ. (ಸಂ), ಪ್ರಧಾನ್ ಗುರುದತ್ತ (ಪ್ರ.ಸಂ.), (2006), ಚಂದ್ರಶೇಖರ ಕಂಬಾರ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

ಆಮೂರ ಜಿ.ಎಸ್., (2007), ಸಮಾರಾಧನ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ಬಸವರಾಜ ಪಿ. ಡೋಣೂರ, (2008), ಕನ್ನಡ ನಾಟಕ ಮತ್ತು ವಾಸ್ತವತೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

Downloads

Published

02.02.2025

How to Cite

ಎಂ. ಎನ್. ಅರ್ಚನ ತೇಜಸ್ವಿ. (2025). ಪರಿಪೂರ್ಣತೆಯ ಭ್ರಮೆ ಕಳಚುವ ಕಂಬಾರರ ಸಿರಿಸಂಪಿಗೆ. ಅಕ್ಷರಸೂರ್ಯ (AKSHARASURYA), 5(06), 08 to 16. Retrieved from https://aksharasurya.com/index.php/latest/article/view/589

Issue

Section

ಸಂಶೋಧನಾ ಲೇಖನಗಳು. | RESEARCH ARTICLE.