ತತ್ವಪದಕಾರ ಕುರುಬರ ಲಿಂಗಯ್ಯನವರ ಜೀವನ ಮತ್ತು ಸಾಧನೆ
Keywords:
ಕುರುಬ, ತತ್ವಪದ, ಕ್ರಾಂತಿ, ಸಂಸಾರ, ಪರಂಪರೆAbstract
ಚಿತ್ರದುರ್ಗ ಜಿಲ್ಲೆ ಹಾಗೂ ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ವೀರಪ್ಪ ಮತ್ತು ಮಲ್ಲಮ್ಮ ಎಂಬ ಇಬ್ಬರು ದಂಪತಿಗಳಿಗೆ ಮಗನಾಗಿ ಹುಟ್ಟಿ, ಬಾಲ್ಯದಿಂದಲೂ ಕುತೂಹಲಕಾರಿಯಗಿ ಬೆಳೆದ ಕುರುಬರ ಲಿಂಗಯ್ಯನವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ “ಮಾರೀಜಾತ್ರೆ” ಎಂಬ ಕೃತಿಯನ್ನು ಬರೆಯುವುದರ ಮೂಲಕ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದ್ದಾರೆ. ಆಗಿನ ಕಾಲದಲ್ಲಿ ಕೆ.ಎಲ್.ಎಸ್. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಶ್ರೇಣಿಗಳಿಸಿ ಜಿಲ್ಲಾ ವಿದ್ಯಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು. ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡು ಸಾಹಿತ್ಯದ ಮೇಲೆ ಒಲವು ಇಟ್ಟುಕೊಂಡು ಅನೇಕ ಗ್ರಂಥಗಳನ್ನು ಓದಿಕೊಂಡು ತಮ್ಮದೇ ಆದ ಶೈಲಿಯಲ್ಲಿ ಕತೆ, ನಾಟಕ, ಷಟ್ಪದಿ, ರಗಳೆ, ಶತಕ, ತ್ರಿಪದಿ, ಕಂದ ಪದ್ಯಗಳು, ತತ್ವಪದಗಳು, ಜೀವನ ಚರಿತ್ರೆ, ಅನುವಾದ ಮೊದಲಾದ ಪ್ರಕಾರಗಳಲ್ಲಿ ತಮ್ಮ ಬರವಣಿಗೆಯಲ್ಲಿ ರೂಪಿಸಿದ್ದಾರೆ. ಅವರು ಇಡೀ ಭಾರತೀಯ ಪರಂಪರೆಯಲ್ಲೆ ಅತೀ ಹೆಚ್ಚು ತತ್ವಪದಗಳನ್ನು ಬರೆದಿರುವವರ ಸಾಲಿನಲ್ಲಿ ಲಿಂಗಯ್ಯನವರು ಒಬ್ಬರೇ ಎಂದರೆ ಅತಿಶಯೋಕ್ತಿಯಾಗಲಾರದು. ಇದರ ಜೊತೆಗೆ ಸಂಸಾರ, ಶಿಕ್ಷಣ, ಸಾಮಾಜಿಕ ಹೋರಾಟಗಳನ್ನು ಮೈಗೂಡಿಸಿಕೊಂಡಿದ್ದರು. ವಿಶೇಷವಾಗಿ ಇವರ ತತ್ವಪದಗಳನ್ನು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರು ಕುರುಬರ ಲಿಂಗಯ್ಯನವರ ತತ್ವಪದಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ಒಟ್ಟಾರೆಯಾಗಿ ಸಾಮಾಜಿಕ ಸಮಸ್ಯೆಗಳನ್ನು ಇವರು ತಮ್ಮ ತತ್ವಪದಗಳ ಮೂಲಕ ಟೀಕಿಸಿರುವುದು ವಿಶೇಷವಾಗಿದೆ.
References
ಎರ‍್ರಿಸ್ವಾಮಿ ಎನ್.ಟಿ., (2016), ಅಡವಿ ಬೆಳದಿಂಗಳು, ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.
ಹಳ್ಳಿಕೇರಿ ಎಫ್.ಟಿ., (2019), ಹಾಲುಮತ ಸಂಸ್ಕೃತಿ –2, ಯಾಜಿ ಪ್ರಕಾಶನ, ಹೊಸಪೇಟೆ.
ಅಮರೇಶ ನುಗಡೋಣಿ, (2014), ತತ್ವಪದ ಸಾಹಿತ್ಯ ಅಧ್ಯಯನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
Downloads
Published
How to Cite
Issue
Section
License
Copyright (c) 2025 AKSHARASURYA
This work is licensed under a Creative Commons Attribution 4.0 International License.