ವೈದೇಹಿಯವರ ಕಥಾ ಸಾಹಿತ್ಯದ ವಿಶಿಷ್ಟತೆ.

Authors

  • Chandana K. S.

Abstract

ನವ್ಯೋತ್ತರ ಕಾಲಘಟ್ಟದಲ್ಲಿ ಸಾಹಿತ್ಯ ರಚನೆಗೆ ತೊಡಗಿ ಮೇಲ್ವರ್ಗವೆಂದು ಹೆಸರಾದ ಬ್ರಾಹ್ಮಣವರ್ಗದಲ್ಲೂ ಇರುವ ಹಲವು ಬಿಕ್ಕಟ್ಟುಗಳನ್ನು, ನಮ್ಮ ಸಮಾಜದ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನೂ ತಮ್ಮ ಕತೆಗಳಲ್ಲಿ ತಂದವರು ‘ವೈದೇಹಿ’ ಎಂಬ ಕಾವ್ಯನಾಮ ಹೊಂದಿದ ಜಾನಕಿ ಶ್ರೀನಿವಾಸಮೂರ್ತಿಯವರು. 1979ರಿಂದ ಸಾಹಿತ್ಯ ರಚನೆಯನ್ನಾರಂಭಿಸಿ ಕತೆ, ಕಾದಂಬರಿ, ಕವಿತೆ, ಮಕ್ಕಳ ನಾಟಕ, ಪ್ರಬಂಧ, ಅಂಕಣ ಬರಹ, ಆತ್ಮಚರಿತ್ರೆ ನಿರೂಪಣೆ ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ವೈದೇಹಿಯವರು ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೂವರು ಲೇಖಕಿಯರಲ್ಲಿ ಎರಡನೆಯವರು. ತಾವು ಕಂಡ ಬದುಕುಗಳನ್ನೇ ಸಾಹಿತ್ಯದಲ್ಲಿ ಕತೆಯಾಗಿ ರಚಿಸುವ ಕಾರಣದಿಂದ ಕಲ್ಪಿತ ಕಪ್ಪು ಬಿಳುಪು ಪಾತ್ರಗಳ ನಾಯಕ ನಾಯಕಿಯರನ್ನು ಸೃಷ್ಟಿಸಿ ಓದುಗರನ್ನೂ ಭ್ರಮೆಯಲ್ಲಿ ತೇಲಿಸುವ ಬಹುತೇಕ ಬರಹಗಾರ್ತಿಯರ ಬರಹಗಳಿಗಿಂತ ವೈದೇಹಿಯವರ ಬರಹವು ಭಿನ್ನವಾಗಿದ್ದು ಸಮಾಜಮುಖಿಯಾಗಿದೆ.

References

ಮುರಳೀಧರ ಉಪಾಧ್ಯ ಹಿರಿಯಡಕ (ಸಂ), 2018, ವೈದೇಹಿ ಜೀವನ ಮತ್ತು ಕೃತಿಗಳ ಸಮೂಹ ಶೋಧ

ಅಶೋಕ ಟಿ.ಪಿ, 2013, ವೈದೇಹಿ ಕಥನ, ಅಕ್ಷರ ಪ್ರಕಾಶನ, ಹೆಗ್ಗೋಡು.

ತಾರಿಣಿ ಶುಭದಾಯಿನಿ ಮತ್ತು ಸವಿತಾ ನಾಗಭೂಷಣ (ಸಂ.), 2019, ಇರುವಂತಿಗೆ, ವೈದೇಹಿ ಗೌರವ ಗ್ರಂಥ ಸಮಿತಿ, ಶಿವಮೊಗ್ಗ.

Downloads

Published

05.02.2023

How to Cite

Chandana K. S. (2023). ವೈದೇಹಿಯವರ ಕಥಾ ಸಾಹಿತ್ಯದ ವಿಶಿಷ್ಟತೆ. ಅಕ್ಷರಸೂರ್ಯ (AKSHARASURYA), 2(02), 44 to 46. Retrieved from https://aksharasurya.com/index.php/latest/article/view/53

Issue

Section

Article