ಕುಂ. ವೀರಭದ್ರಪ್ಪ ಅವರ ಕಾದಂಬರಿಗಳು: ಪ್ರತಿಭಟನೆಯ ಹೊಸ ಸಾಧ್ಯತೆಯ ಶೋಧ.

Authors

  • Mallaiah Sandur

Abstract

ಕುಂ. ವೀರಭದ್ರಪ್ಪನವರ ‘ಬೇಲಿಯ ಹೂಗಳು’ ಮತ್ತು ‘ಕೊಟ್ರೇಶಿ ಕನಸು’ ಈ ಎರಡೂ ಕಾದಂಬರಿಗಳಲ್ಲಿ ತಳಸಮುದಾಯ ತಮ್ಮ ಸಾಂಸ್ಕೃತಿಕ ಅಸ್ತಿತ್ವದ ಜೊತೆಗೆ ಸಮಕಾಲೀನ ಸವಾಲುಗಳನ್ನು ಎದುರಿಸುವುದು ಮತ್ತು ಅಧಿಕಾರ ಕೇಂದ್ರಿತ ವ್ಯವಸ್ಥೆಯನ್ನು ಹೊಡೆದು ಹಾಕುವುದಾಗಿದೆ. ಇದಕ್ಕಾಗಿ ಮೇಲ್ವರ್ಗ ಹಾಕಿಕೊಟ್ಟಿರುವ ಕೆಲವು ಸಿದ್ಧಮಾದರಿಗಳನ್ನು ಭಂಜಿಸುತ್ತದೆ. ಅದಕ್ಕಾಗಿ ತಾವಿರುವ ಸ್ಥಿತಿಗೆ ಮರುಕವನ್ನು ಹುಟ್ಟಿಸದೆ, ಅಂದರೆ ಅಸಹಾಯಕತೆಯಲ್ಲೇ ಮುಳುಗಿಹೋಗದೆ, ಪ್ರತಿಭಟನೆಯ ಮೂಲಕ ಚೈತನ್ಯವನ್ನು ಪಡೆದುಕೊಂಡಿದೆ.

‘ಬೇಲಿಯ ಹೂಗಳು’ ಪ್ಯಾಂಟಸಿಯಂತೆ ಕಂಡುಬಂದರೂ ಆಶಯಗಳಿಗೆ ಹೆಚ್ಚಿನ ಒತ್ತನ್ನು ಕೊಡಲಾಗಿದೆ. ಮುಖ್ಯವಾಗಿ ಈ ಕಾದಂಬರಿಗಳು ಚರಿತ್ರೆ ಮತ್ತು ಪುರಾಣಗಳನ್ನು ಮರುವಿಮರ್ಶೆಗೆ ಒಡ್ಡಿದೆ ಮತ್ತು ಅದರ ಅವಶ್ಯಕತೆಯನ್ನು ಒತ್ತಿ ಹೇಳಿದೆ. ಶೋಷಿತ ಸಮುದಾಯದ ಪ್ರತಿಯೊಬ್ಬನ ಸುಪ್ತ ಮನಸ್ಸಿನಲ್ಲಿರುವ ಅಸಮಾಧಾನ, ನೋವುಗಳು, ಸಿಟ್ಟು, ಸಾಮೂಹಿಕವಾಗಿ ಪ್ರತಿಭಟನೆಯ ಸ್ವರೂಪವಾಗಿ ಹೊರಹೊಮ್ಮಿದರೆ ಸಮಕಾಲೀನ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದು ಇಲ್ಲಿ ವ್ಯಕ್ತವಾಗಿದೆ. ಈ ಎರಡೂ ಕಾದಂಬರಿಗಳಲ್ಲಿ ಹೆಣ್ಣುಗಂಡಿನ ಪ್ರೀತಿ ಹಾಗೂ ಅಕ್ಷರ ಕಲಿಕೆ ಇವೆರಡೂ ವ್ಯವಸ್ಥೆಯ ಚೌಕಟ್ಟನ್ನು ಮೀರಿ ಸಂಭವಿಸಿದಾಗ ಹೊಸ ಹುಟ್ಟು ಸಾಧ್ಯವಾಗಿದೆ. ಇದು ಪ್ರತಿಭಟನೆಯ ಭಾಗವಾಗಿ ಬಿಡುಗಡೆಯ ಸಾಧ್ಯತೆಗಳನ್ನು ತೋರಿಸುತ್ತದೆ.

Downloads

Published

05.02.2023

How to Cite

Mallaiah Sandur. (2023). ಕುಂ. ವೀರಭದ್ರಪ್ಪ ಅವರ ಕಾದಂಬರಿಗಳು: ಪ್ರತಿಭಟನೆಯ ಹೊಸ ಸಾಧ್ಯತೆಯ ಶೋಧ. AKSHARASURYA, 2(02), 18 to 22. Retrieved from https://aksharasurya.com/index.php/latest/article/view/47

Issue

Section

Article