ಚೆನ್ನಣ್ಣ ವಾಲೀಕಾರ ಅವರ ಕಥೆಗಳಲ್ಲಿ ಪ್ರತಿರೋಧದ ನೆಲೆ

Authors

  • ರಾಘವೇಂದ್ರ ಬಿ. ಎ. ದ್ರಾಕ್ಷಿ ಸಂಶೋಧನ ವಿದ್ಯಾರ್ಥಿ, ಕನ್ನಡ ವಿಭಾಗ, ಮಾನವಿಕ ಮತ್ತು ಭಾಷಾನಿಕಾಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರ್ಗಿ.
  • ವಿಜಯಕುಮಾರ ಹೆಚ್‌. ವಿಶ್ವಮಾನವ ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಮಾನವಿಕ ಮತ್ತು ಭಾಷಾನಿಕಾಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರ್ಗಿ.

Keywords:

ಮಾನವ, ಸಂಘ ಜೀವಿ, ರಾಷ್ಟ್ರದ ಏಳಿಗೆ, ಬಂಡಾಯ, ಸಣ್ಣ ಕಥೆ

Abstract

ಕಥೆ ಹೇಳುವುದು ಮತ್ತು ಕೇಳುವುದು ಮನುಷ್ಯನ ಆಸಕ್ತಿ ಮತ್ತು ಹವ್ಯಾಸಿ ಎರಡು ಹೌದು. ಕೆಲವು ವರ್ಷಗಳ ಹಿಂದೆ ದೂರದರ್ಶದನಂತಹ ಮಾಧ್ಯಮಗಳು ಬರುವುದಕ್ಕೆ ಮುಂಚೆ ಭಾರತದಂತಹ, ಕರ್ನಾಟಕದಂತಹ ಹಳ್ಳಿಗಳಲ್ಲಿ ಹಿರಿಯರು ಹೇಳುವ ಕತೆಗಳೇ ಮನರಂಜನೆಯ ತಾಣಗಳು ಆಗಿದ್ದವು. ನನಗೆ ನೆನಪಿರುವ ಹಾಗೆ ಚಿಕ್ಕವನಿರುವಾಗ ನಮ್ಮ ಅಜ್ಜಿಯೂ ಹಲವೂ ಕಥೆಗಳನ್ನು ಹೇಳಿ ಕಥೆ ಎಂದರೆ ಏನು ಎಂಬುದನ್ನು ಪರಿಚಯಿಸಿದ್ದಳು. ಅಷ್ಟೇ ಅಲ್ಲದೆ ಅವರು ಹೇಳುವ ಕಥೆಗಳಲ್ಲಿ ಜೀವನದ ಬದುಕಿನ ಅನುಭವದ ಸತ್ಯಾಸತ್ಯಗಳನ್ನು ಒಳಗೊಂಡಿರುವಂತಹ ಮೌಲ್ಯಯುತವಾದ, ನೀತಿಯುತವಾದ ಸಂದೇಶಗಳನ್ನು ಸಾರುವ ಕಥೆಗಳಾಗಿದ್ದವು. ಇಂತಹ ಕಥೆಗಳನ್ನು ಹಿರಿಯರಿಂದ ಕೇಳಿ ಆಧುನಿಕ ಕಥಾ ಸಾಹಿತ್ಯದಲ್ಲಿ ಹಲವಾರು ಕಥೆಗಳನ್ನು ಬರೆದ ಕಥೆಗಾರರು ಕನ್ನಡ ಸಾಹಿತ್ಯದಲ್ಲಿ ಕಂಡು ಬರುತ್ತಾರೆ. ಅವರಲ್ಲಿ ಚೆನ್ನಣ್ಣ ವಾಲೀಕಾರರು ಒಬ್ಬರೂ. ಈ ಕಥಾ ಸಾಹಿತ್ಯವೂ ತನ್ನದೇಯಾದ ಪರಂಪರೆ ಹೊಂದಿದ್ದು ಪ್ರಾಚೀನ ಸಾಹಿತ್ಯದಿಂದ ದಲಿತ ಬಂಡಾಯ ಸಾಹಿತ್ಯದವರೆಗೆ ಬೆಳೆಯುತ್ತ ಬಂದಿದೆ. ದಲಿತ-ಬಂಡಾಯ ಸಾಹಿತ್ಯದ ಪ್ರಸಿದ್ದ ಸಾಹಿತಿಗಳು, ಚಿಂತಕರು, ಹೋರಾಟಗಾರರು ಆದ ಚೆನ್ನಣ್ಣ ವಾಲೀಕಾರರು ಕಥಾ ಸಾಹಿತ್ಯದಲ್ಲಿಯೂ ತಮ್ಮ ಅನುಭವಕ್ಕೆ ಬಂದ, ತಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ, ಅಸಮಾನತೆ, ಅತ್ಯಾಚಾರ, ಅನೈತಿಕ ಸಂಬಂಧ ಮೊದಲಾದ ಘಟನೆಗಳನ್ನು ಕಥಾ ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದಾರೆ. ಅವರ ಕಥೆಗಳನ್ನು ಒಳಗೊಂಡ “ಚೆನ್ನಣ್ಣ ವಾಲೀಕಾರ ಕಥೆಗಳಲ್ಲಿ ಪ್ರತಿರೋಧದ ನೆಲೆ” ಎಂಬ ಲೇಖನದಲ್ಲಿ ಆಯ್ದ ಕಥೆಗಳನ್ನು ಪ್ರತಿರೋಧದ ಹಿನ್ನಲೆಯಲ್ಲಿ ವಿಮರ್ಶೆಗೆ ಒಳಪಡಿಸಿರುವುದು ಒಂದು ಸಣ್ಣ ಪ್ರಯತ್ನವಾಗಿದೆ.

References

ಚೆನ್ನಣ್ಣ ವಾಲೀಕಾರ. (2003). ಸಮಗ್ರ ಕಥಾ ಸಂಪುಟ. ದಲಿತ ಬಂಡಾಯ ಸಾಹಿತ್ಯ ಪ್ರಕಾಶನ. ಗುಲಬರ್ಗಾ.

ಶಿವಗಂಗಾ ರುಮ್ಮಾ. (2016). ತಳಕ್ಕೆ ನೀರೆರೆದರೆ. ಸಿದ್ಧಲಿಂಗೇಶ್ವರ ಪ್ರಕಾಶನ. ಗುಲಬರ್ಗಾ.

ರಾಮಚಂದ್ರ ಗಣಾಪೂರ. (2022). ದಲಿತ ಬಂಡಾಯ ಸಾಹಿತ್ಯ. ಸಿದ್ಧಲಿಂಗೇಶ್ವರ ಪ್ರಕಾಶನ. ಗುಲಬರ್ಗಾ.

Downloads

Published

08.06.2024

How to Cite

ರಾಘವೇಂದ್ರ ಬಿ. ಎ. ದ್ರಾಕ್ಷಿ, & ವಿಜಯಕುಮಾರ ಹೆಚ್‌. ವಿಶ್ವಮಾನವ. (2024). ಚೆನ್ನಣ್ಣ ವಾಲೀಕಾರ ಅವರ ಕಥೆಗಳಲ್ಲಿ ಪ್ರತಿರೋಧದ ನೆಲೆ . AKSHARASURYA, 4(02), 98 to 112. Retrieved from https://aksharasurya.com/index.php/latest/article/view/434

Issue

Section

ಪುಸ್ತಕ ವಿಮರ್ಶೆ. | BOOK REVIEW.