ಎ. ಪಂಕಜ ಅವರ ಕಾದಂಬರಿಗಳಲ್ಲಿ ದುರಂತ ನಾಯಕಿಯರು

Authors

  • ಪುಟ್ಟಸ್ವಾಮಿ ಎನ್. ಎನ್. ಸಂಶೋಧನಾ ವಿದ್ಯಾರ್ಥಿ, ಕನ್ನಡ ವಿಭಾಗ, ಸ್ನಾತಕೋತ್ತರ ಕೇಂದ್ರ, ಹೇಮಗಂಗೋತ್ರಿ, ಹಾಸನ.
  • ಪುಟ್ಟಸ್ವಾಮಿ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸ್ನಾತಕೋತ್ತರ ಕೇಂದ್ರ, ಹೇಮಗಂಗೋತ್ರಿ, ಹಾಸನ.

Keywords:

ಸ್ತ್ರೀ ಸ್ಥಾನಮಾನ, ಬಯಕೆ, ತಾಟಸ್ಥ್ಯ ಧೋರಣೆ, ಬಾಲ್ಯ ವಿವಾಹ, ದೌರ್ಭಾಗ್ಯ, ಪುರುಷ ಪ್ರಾಧಾನ್ಯತೆ

Abstract

ಯಾವುದೇ ಸಾಹಿತಿಯಾದರೂ ಸಹ ಸಮಕಾಲೀನ ಸಮಾಜದ ನೈಜ ಜೀವನವನ್ನು ಇಲ್ಲವೇ ತಮ್ಮ ಮನದ ಭಾವನೆಗಳನ್ನು ಯಥಾವತ್ತಾಗಿ ಹೇಳುವಲ್ಲಿಯೂ ಕೂಡ ಆತನ ಸೃಜನಶೀಲತೆ ದುಡಿಯುತ್ತದೆ. ಎ. ಪಂಕಜ ಅವರು ಮಹಿಳಾ ಸಾಹಿತ್ಯ ಪರಂಪರೆಯಲ್ಲಿ ‘ಸಮನ್ವಯ ಸಾಹಿತ್ಯದ ಲೇಖಕಿ’ ಎಂದೇ ಪರಿಚಿತರು. ಇವರು ತಮ್ಮ ಕಾದಂಬರಿ ಮುಖೇನ ಸನ್ನಿವೇಶವನ್ನು ಪ್ರಸ್ತುತಪಡಿಸುತ್ತಾರೆಯೇ ಹೊರತು ಪ್ರತಿಭಟಿಸುವವರಲ್ಲ. ಕೆಲವೊಮ್ಮೆ ಆ ನಿಟ್ಟಿನ ಛಾಯೆಯನ್ನ ಕಾಣಬಹುದೇ ಹೊರತು ಯಾವ ಪಾತ್ರಗಳೂ ಸಹ ಬಲವಾಗಿ ಪ್ರತಿಭಟಿಸುವುದಿಲ್ಲ. ವಿಶೇಷವೆಂದರೆ ಇವರ ಕಾದಂಬರಿಗಳೆಲ್ಲವೂ ಭಾಗಶಃ ಸ್ತ್ರೀ ಕೇಂದ್ರಿತವೇ. ಆದರೂ ಸ್ತ್ರೀ ಪರವಾಗಿ ನಿಂತದ್ದು ಬಹಳ ಕಡಿಮೆ. ಸ್ತ್ರೀಯನ್ನು ಕೇಂದ್ರವಾಗಿಸಿಕೊಂಡು ಕುಟುಂಬದ ಜೊತೆಗೇ ಸಮಕಾಲೀನ ಸಾಮಾಜಿಕ ಬದುಕನ್ನು, ಹೆಣ್ಣಿನ ಸಾಮಾಜಿಕ ಸ್ಥಾನಮಾನವನ್ನು ಪ್ರಸ್ತುತಪಡಿಸುತ್ತಾರೆ. ಒಂದುವೇಳೆ ಅದು ಸ್ತ್ರೀಗೆ ತಕ್ಕುದಲ್ಲದಿದ್ದರೂ ಆ ಪಾತ್ರ ಪ್ರತಿಭಟಿಸುವ ಬದಲಿಗೆ ಒಪ್ಪಿ ನಡೆಯುತ್ತದೆ. ‘ಬಯಕೆಯ ಬೆಂಕಿ’ಯ ವಲ್ಲಿ, ನಿರ್ಮಲೆ, ಕುಮುದಾ, ‘ಮಾನಸ’ದ ಜಾನಕಿ, ‘ಬಲಿಪಶು’ವಿನ ಮಂಜುಳಾ, ‘ಅವನೇ ಕಾರಣ’ದ ಪಾರ್ವತಿ ಹೀಗೇ ಇವರ ಎಲ್ಲಾ ಸ್ತ್ರೀ ಪಾತ್ರಗಳೂ ಕೂಡ ತಮ್ಮ ಜೀವನದುದ್ದಕ್ಕೂ ಪುರುಷ ಪಾತ್ರ ಇಲ್ಲವೇ ಪುರುಷ ಪ್ರಧಾನ ಸಮಾಜದಿಂದ ಒಂದಿಲ್ಲೊಂದು ರೀತಿಯಲ್ಲಿ ಹಿಂಸೆಗೊಳಗಾಗಿವೆ. ತಮ್ಮ ಅನಿಸಿಕೆಗಳಿಗೆ ಅವಕಾಶವೇ ಇಲ್ಲವೆಂಬಂತೆ ಚಿತ್ರಿಸಲ್ಪಟ್ಟಿದ್ದು, ಕಡೆಗೆ ಅವಮಾನದಿಂದಲೋ, ಸಮಸಮಾಜವನ್ನು ಎದುರಿಸಲಾಗದೆಯೋ ಅಕಾಲಿಕವಾಗಿ ಮರಣವನ್ನಪ್ಪುತ್ತವೆ. ಸ್ತ್ರೀ ಸ್ಥಾನಮಾನ ಉನ್ನತೀಕರಣದತ್ತ ಮುಖ ಮಾಡಿದ್ದ ಕಾಲಘಟ್ಟದಲ್ಲೂ ಕೂಡ ಇವರ ಬರವಣಿಗೆ ಸ್ತ್ರೀ ವಿಚಾರದಲ್ಲಿ ತಾಟಸ್ಥ್ಯ ಧೋರಣೆ ತಾಳಿರುವುದು ವಿಪರ್ಯಾಸದ ಸಂಗತಿ.

References

ಕಯ್ಯಾರ ಕಿಣ್ಜಣ್ಣ ರೈ (1989). ಸಾಹಿತ್ಯ ದೃಷ್ಟಿ (ಲೇಖನಗಳು ಮತ್ತು ಭಾಷಣಗಳು). ಕರ್ನಾಟಕ ಸಂಘ. ಪುತ್ತೂರು, ದಕ್ಷಿಣ ಕನ್ನಡ.

ಗೋವಿಂದರಾಜು ಗಿರಡ್ಡಿ. (2012). ಸಮಗ್ರ ವಿಮರ್ಶೆ: ಸಂಪುಟ-3. ಸಪ್ನ ಬುಕ್ ಹೌಸ್ (ಪೈ) ಲಿ. ಬೆಂಗಳೂರು.

ವಿಜಯಶ್ರೀ ಸಬರದ. (1994). ಅನುಪಮಾ ನಿರಂಜನ ಅವರ ಕಾದಂಬರಿಗಳು: ಒಂದು ಸಾಹಿತ್ಯಿಕ ಅಧ್ಯಯನ. ಡಿ. ವಿ. ಕೆ. ಮೂರ್ತಿ ಪ್ರಕಾಶನ. ಮೈಸೂರು.

ಶೇಷಗಿರಿರಾವ್ ಎಲ್. ಎಸ್. (1990). ಕಾದಂಬರಿ: ಸಾಮಾನ್ಯ ಮನುಷ್ಯ. ಶಾರದಾ ಪ್ರಕಾಶನ. ಬೆಂಗಳೂರು.

Downloads

Published

08.06.2024

How to Cite

ಪುಟ್ಟಸ್ವಾಮಿ ಎನ್. ಎನ್., & ಪುಟ್ಟಸ್ವಾಮಿ. (2024). ಎ. ಪಂಕಜ ಅವರ ಕಾದಂಬರಿಗಳಲ್ಲಿ ದುರಂತ ನಾಯಕಿಯರು. AKSHARASURYA, 4(02), 87 to 97. Retrieved from https://aksharasurya.com/index.php/latest/article/view/433

Issue

Section

ಪುಸ್ತಕ ವಿಮರ್ಶೆ. | BOOK REVIEW.