ಇದು ಎಂದೆಂದಿಗೂ ‘ನಿಚ್ಚಂ ಪೊಸತು!

Authors

  • ವಿ. ಚಂದ್ರಶೇಖರ ನಂಗಲಿ

Keywords:

ನಿಚ್ಚಂ ಪೊಸತು, ಅಂಬೇಡ್ಕರ್‌, ಮೈಸೂರು, ಪಂಪ, ಬಸವರಾಜ ಕಟ್ಟೀಮನಿ, ತೇಜಸ್ವಿ, ಕೋಟಿಗಾನಹಳ್ಳಿ ರಾಮಯ್ಯ

Abstract

‘ನಿಚ್ಚಂ ಪೊಸತು’ ಕೃತಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಬುದ್ಧ ಕೇಂದ್ರಿತ ಕವನಗಳನ್ನು ಕುರಿತ ಸಮಾಲೋಚನೆ, ಮೈಸೂರು ಕೇಂದ್ರಿತ ಸಾಂಸ್ಕೃತಿಕ ಮಹತ್ವವನ್ನು ಕುರಿತ ಪರಿಶೀಲನೆ, ಯೆಹೂದ್ಯರಿಗಾಗಿ ಮುಂದೆ ಬಂದು ಪೀಡಿತನಾಗುವ ಮೋಸೆಸ್‌ನ ಮಹಾಯಾನ, ಮುಲ್ಕ್ರಾಜ್ ಆನಂದ್ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತುಕತೆ, ಭೀಮಜ್ಯೋತಿ ಬಿ.ಬಸವಲಿಂಗಪ್ಪ ಅವರ ಅರಿವಿನ ಯಾನ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯ ಮನೋವಿಕಾರಗಳನ್ನು ಮೀರಿ ಸೋದರಸ್ನೇಹದಿಂದ ಬಾಳಿದ ಎಸ್‌ಪಿಬಿ+ಜೇಸುದಾಸ್ ಕುರಿತ ಲೇಖನಗಳೂ ಇವೆ. ಇವೆಲ್ಲವನ್ನೂ ‘ನಿಚ್ಚಂ ಪೊಸತು’ ಎಂಬ ಹೃದ್ಯಭಾವದಿಂದ ಭೈರಪ್ಪನವರು ಒಳಗೊಂಡಿರುವುದು ಸ್ತುತ್ಯಾರ್ಹವಾಗಿದೆ. ಭೈರಪ್ಪನವರ ಪುಸ್ತಕದ ತಾತ್ವಿಕತೆ ಎಂದರೆ ಜಾತಿ ಶ್ರೇಣೀಕರಣದ ಕೆನೆಪದರದಲ್ಲಿ ತನ್ನನ್ನು ಗುರುತಿಸಿಕೊಳ್ಳದೆ, ಬಾಳ್ವೆಯಲ್ಲಿ ಬೆಂದು ಸೀದು ಕರಿಕಾದ ಗಸಿಪದರದಲ್ಲಿ ತನ್ನನ್ನು ಗುರುತಿಸಿಕೊಂಡಿರುವುದು. ಇದು ಎಂದೆಂದಿಗೂ ‘ನಿಚ್ಚಂ ಪೊಸತು’!

Downloads

Published

08.06.2024

How to Cite

ವಿ. ಚಂದ್ರಶೇಖರ ನಂಗಲಿ. (2024). ಇದು ಎಂದೆಂದಿಗೂ ‘ನಿಚ್ಚಂ ಪೊಸತು!. AKSHARASURYA, 4(02), 18 to 26. Retrieved from https://aksharasurya.com/index.php/latest/article/view/426

Issue

Section

ಕಾಲುದಾರಿ. | BYWAY.