ಭಾರತೀಯ ಸಂಗೀತಕ್ಕೆ ಪಂಢರೀಕ ವಿಠಲನ ಕೊಡುಗೆ
Keywords:
ಭಾರತೀಯ ಸಂಗೀತ, ಸಂಗೀತ ಗ್ರಂಥ, ಸಂಗೀತ ಗ್ರಂಥಕಾರರ ಕೊಡುಗೆAbstract
ಪುಂಢರೀಕ ವಿಠಲ ೧೯ನೇ ಶತಮಾನದಲ್ಲಿ ಜೀವಿಸಿದ ಒಬ್ಬ ಮಹಾನ್ ಸಂಗೀತಜ್ಞ, ಅವನು ಕನ್ನಡಿಗ. ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಸಾತನೂರಿನವನು. ಕರ್ನಾಟಕದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಹೆಸರು ಪಡೆದವನು. ಕರ್ನಾಟಕೀ ಸಂಗೀತ, ಹಿಂದುಸ್ತಾನಿ ಸಂಗೀತ ಹಾಗೂ ನರ್ತನ ಈ ಮೂರರಲ್ಲೂ ಅಪ್ರತಿಮ ಪಾಂಡಿತ್ಯ ಮೆರೆದವನು. ಈ ಮೂರು ಕಲೆಗಳ ಆಧುನಿಕ ರೂಪಗಳಿಗೆ ನಾಂದೀವಾಚನವನ್ನು ಮಾಡಿದ ಆದ್ಯಾಚಾರ್ಯ; ಪುರಂದರದಾಸರನ್ನು ‘ಕರ್ನಾಟಕೀ ಸಂಗೀತದ ಪಿತಾಮಹ’ ಎನ್ನುವುದಾದರೆ, ಪುಂಢರೀಕ ವಿಠಲನನ್ನು ‘ಸಂಗೀತ ನೃತ್ಯ ಲಕ್ಷಣಗಳ ಪಿತಾಮಹ’ ಎನ್ನಲಡ್ಡಿಯಿಲ್ಲವೆಂಬುದು ಸಂಗೀತ ವಿದ್ವಾಂಸರ ಅಭಿಪ್ರಾಯ. ಭಾರತೀಯ ಸಂಗೀತಕ್ಕೆ ಪುಂಢರೀಕ ವಿಠಲನ ಕೊಡುಗೆ ಅಪಾರ ಮತ್ತು ಅಪತ್ರಿಮ. ಅವನು ರಚಿಸಿದನೆನ್ನುವ ಆರು ಗ್ರಂಥಗಳ ಪೈಕಿ ಈಗ ದೊರೆತಿರುವ ಗ್ರಂಥಗಳು ಕೇವಲ ನಾಲ್ಕು. ಉಳಿದೆರಡು ಅಲಭ್ಯ. ಅವನು ಸಂಗೀತ ಮತ್ತು ನೃತ್ಯ ಕುರಿತು ರಚಿಸಿದ ನಾಲ್ಕು ಗ್ರಂಥಗಳು ಸಂಗೀತದ ಶಾಸ್ತ್ರ ಮತ್ತು ಪ್ರಾಯೋಗಿಕ ಎರಡು ಕ್ಷೇತ್ರಗಳನ್ನು ಆಳಬಲ್ಲ ಆಧಾರ ಗ್ರಂಥಗಳು. ಅವುಗಳೆಲ್ಲವೂ ಸಂಸ್ಕೃತ ಭಾಷೆಯಲ್ಲಿವೆ. ಚಿಕ್ಕಂದಿನಿಂದಲೇ ಸಂಗೀತದಲ್ಲಿ ಒಲವಿರಿಸಿಕೊಂಡಿದ್ದ ಪುಂಢರೀಕವಿಠಲ ಕರ್ನಾಟಕೀ ಸಂಗೀತದ ಹಿರಿಮೆಯನ್ನು ಪ್ರಚಾರ ಮಾಡಲು, ಉತ್ತರ ಭಾರತದ ಕಡೆ ‘ಸಂಗೀತ ಯಾತ್ರೆ’ ಬೆಳಿಸಿದನು. ಅವನು ಮೊದಲು ಭೇಟಿಕೊಟ್ಟದ್ದು ಬರ‍್ಹಾನಪುರಕ್ಕೆ. ಅಕಬರನ ಸಾಮಂತ ಮಾಧವ ಸಿಂಹ ಅಲ್ಲಿಯ ಅರಸನಾಗಿದ್ದ. ಆತ ಕಲಾಪ್ರೇಮಿ ಮತ್ತು ಗುಣ ಗ್ರಹಿಯಾಗಿದ್ದ. ಅವನು ಪುಂಢರೀಕ ವಿಠಲನ ಪಾಂಡಿತ್ಯವನ್ನು ಗಮನಿಸಿ ಅವನಿಗೆ ರಾಜಾಶ್ರಯ ನೀಡಿದ.
References
ಸತ್ಯನಾರಾಯಣ ರಾ. (೧೯೮೬). ಪಂಢರೀಕ ಮಾಲಾ. ಸಂಗೀತ ನೃತ್ಯ ಅಕಾಡೆಮಿ. ಬೆಂಗಳೂರು. ಪು.ಸಂ. ೧
ಲಕ್ಷ್ಮೀನಾರಾಯಣ ಗರ್ಗ. (೧೯೯೩). ಹಮಾರೆ ಸಂಗೀತ ರತ್ನ. ಸಂಗೀತ ಕಾರ್ಯಲಾಯ. ಹಾಥರಸ. ಪು.ಸಂ. ೫೨
ತಿಪ್ಪೆರುದ್ರಸ್ವಾಮಿ ಎಚ್. (೧೯೯೧). ಕರ್ನಾಟಕ ಸಂಸ್ಕೃತಿ ಸಮೀಕ್ಷೆ. ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು. ಪು.ಸಂ. ೬೬೮
ಸತ್ಯನಾರಾಯಣ ರಾ. (೧೯೮೬). ಪಂಢರೀಕ ಮಾಲಾ. ಸಂಗೀತ ನೃತ್ಯ ಅಕಾಡೆಮಿ. ಬೆಂಗಳೂರು. ಪು.ಸಂ. ೬೭