ಪಂಪನ ಕಥಾಸತ್ಯ ಮತ್ತು ಕಾವ್ಯ ನಿಷ್ಠೆ ಹಾಗೂ ಕಾಮವಾಸನೆ: ಆದಿ ಪುರಾಣವನ್ನು ಅನುಲಕ್ಷಿಸಿ.

Authors

  • ಆಯ್. ಬಿ. ಸಾತಿಹಾಳ ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವಲಗುಂದ.

Keywords:

ಭಾವಸಂಪತ್ತಿ, ಕಾವ್ಯಸತ್ತೆ, ಸತ್ಯಸತ್ವ, ರಸತ್ವ, ಪರಿಪಕ್ವಾವಸ್ಥೆ, ಸ್ವರ್ಗಸೌಖ್ಯ, ಕಾಮಸೌಧ, ಕಾಮನೆಂಬ ಮದ್ದಾನೆ, ಕಾವ್ಯಭಿತ್ತಿ, ಪಾತ್ರಾಂತರ

Abstract

‘ಜನ್ಮಾಂತರಗಳಲ್ಲಿ ನಂಭಿಕೆಯಿಟ್ಟು ಸ್ಮರತತ್ವವನ್ನು ಸಂಪೂರ್ಣವಾಗಿ ವಿರೋಧಿಸುತ್ತ, ದಕ್ಕಿದ ಭೋಗ-ವೈಭವಗಳನ್ನೆಲ್ಲ ಬದಿಗಿಟ್ಟು, ತಲೆಗೂದಲನ್ನು ಕಿತ್ತು ದೀಕ್ಷೆ ಕೈಕೊಂಡು, ಗತಪ್ರಾಣನಾಗುವುದರಿಂದ ಜೀವನಿಗೆ ಪುನರ್ ಜನ್ಮದಲ್ಲಿ ಅತ್ಯಾನಂತವಾದ ಪದವಿ-ಫಲಗಳು ಸಹಸ್ರಸಾಗರೋಪಮಾನ ಕಾಲದವರೆಗೆ ಸಿಕ್ಕುತ್ತವೆ’ಎನ್ನುವುದು ಜೈನ ಪುರಾಣಗಳ ಪ್ರಬಲವಾದ ನಿಲುವು. ಇದನ್ನು ತನ್ನ ಆದಿಪುರಾಣ ಕಾವ್ಯದಲ್ಲಿ ನಿರೂಪಿಸಲು ಹೊರಟಿರುವ ಪಂಪನಿಗೆ ಇದು ಸುಲಭವಾದ ಕೆಲಸವಾಗಿರಲಿಲ್ಲ. ಬಹುಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವ ಧಾರ್ಮಿಕ ಕಲ್ಪನೆ ಕನ್ನಡ ನಾಡಿನಲ್ಲಿ ಪಂಪನ ಕಾಲಕ್ಕಾಗಲೇ ಪರ-ವಿರೋಧಗಳನ್ನು ಸ್ವೀಕರಿಸುತ್ತ, ಎದುರಿಸುತ್ತ, ಕುಂಟುತ್ತ ಸಾಗಿತ್ತು. ಅಂಥ ಸಂದರ್ಭದಲ್ಲಿ ಪಂಪನು ಧಾರ್ಮಿಕ ಕಲ್ಪನೆಯನ್ನು ಕಾವ್ಯಸತ್ಯವನ್ನಾಗಿಸುವುದರ ಮೂಲಕ ಜೈನಧರ್ಮಕ್ಕೆ ಈ ನಾಡಿನಲ್ಲಿ ವಿಶೇಷವಾದ ರಾಜ್ಯಮನ್ನಣೆಯನ್ನೊ ದಕ್ಕಿಸಿಕೊಟ್ಟು ಜೈನಧರ್ಮಕ್ಕೆ ನವ ಜೈತನ್ಯವನ್ನು ತುಂಬುತ್ತಾನೆ. ಜನಸಾಮಾನ್ಯರಲ್ಲಿ ಜನ್ಮಾಂತರಗಳ ವಿಷಯದಲ್ಲಿ ಇರುವ ನಂಭಿಕೆ-ನಿರ್ಲಕ್ಷ್ಯಗಳನ್ನು ಕಾವ್ಯದ ಸಂದರ್ಭದಲ್ಲಿ ಚರ್ಚಿಸುತ್ತಾನೆ. ‘ಜೈನಧರ್ಮಮೆ ಧರ್ಮಮಮಂ’ ಎಂದು ಪ್ರತಿಷ್ಠಾಪಿಸಲು ಸಾಕಷ್ಟು ಸ್ಪಷ್ಟೀಕರಣವನ್ನು ನೀಡುತ್ತಾನೆ; ಆ ಮೂಲಕ ತನ್ನ ಕಾವ್ಯ ಸತ್ಯದ ಸತ್ವವನ್ನು ಅನಾವರಣಗೊಳಿಸುತ್ತಾನೆ.

References

ನರಸಿಂಹಶಾಸ್ತ್ರೀ ಕೆ. ಎಲ್. (1999). ಆದಿಪುರಾಣ (ಗದ್ಯಾನುವಾದ). ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

Downloads

Published

07.05.2024

How to Cite

ಆಯ್. ಬಿ. ಸಾತಿಹಾಳ. (2024). ಪಂಪನ ಕಥಾಸತ್ಯ ಮತ್ತು ಕಾವ್ಯ ನಿಷ್ಠೆ ಹಾಗೂ ಕಾಮವಾಸನೆ: ಆದಿ ಪುರಾಣವನ್ನು ಅನುಲಕ್ಷಿಸಿ. AKSHARASURYA, 3(06), 97 to 109. Retrieved from https://aksharasurya.com/index.php/latest/article/view/394

Issue

Section

ಪುಸ್ತಕ ವಿಮರ್ಶೆ. | BOOK REVIEW.