ಕುವೆಂಪು ಮತ್ತು ಕಂಬಾರರ ನಾಟಕಗಳು ಮುಂದಿಡುವ ರಂಗಕಲ್ಪನೆ

Authors

  • PRITHVIRAJ B.

Keywords:

ಸೃಜನಶೀಲ ಬರಹ, ಸೃಜನೇತರ ಬರಹ, ರಂಗ ಕಲ್ಪನೆ, ರಂಗ ಪರಿಭಾಷೆ, ರೂಪನಿಷ್ಠ ವಿಮರ್ಶೆ, ರೂಪನಿಷ್ಠ ವಿಧಾನ

Abstract

ಪ್ರಸುತ್ತ ಸಂಶೋಧಾನ ಲೇಖನವು ಕುವೆಂಪು ಮತ್ತು ಕಂಬಾರರ ಕೃತಿಗಳಲ್ಲಿ ಹೊಸತನು ಹುಡುಕುವ ಪ್ರಯತ್ನವನ್ನು ಮಾಡಲಾಗಿದೆ. ಕುಂವೆಪು ಅವರಲ್ಲಿ ನವೋದಯ ಪ್ರಜ್ಞೆ ಕಾಣಿಸಿದ್ದರೆ ಕಂಬಾರರಲ್ಲಿ ದಲಿತರ ಪರ ಪ್ರಜ್ಞೆ ಕಾಣಿಸಿಕೊಂಡಿದೆ. ಈ ಲೇಖನವನ್ನು ವೀರೆಶ್ ಬಡೀಗಾರ್‌ರವರ ‘ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು’ & ಉತ್ಥಾನಭಾರೀಘಾಟ್‌ಅವರ ‘ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ’ ಎಂಬ ಪುಸ್ತಕಗಳ ಹಿನ್ನಲೆಯಲ್ಲಿ ಬರೆಯಲಾಗಿದೆ. ಇದುವರೆಗೂ ಸಾಹಿತ್ಯ ವಲಯದಲ್ಲಿ ಕಂಬಾರರನ್ನು ಕೇವಲ ಅವರ ಸೃಜನಶೀಲ ಕಲಾಕೃತಿಗಳ ಮೂಲಕವಷ್ಟೇ ಹೆಚ್ಚು ಚರ್ಚಿಸಿದ್ದು ಕಾಣುತ್ತದೆ. ಕಂಬಾರರ ಸೃಜನಶೀಲ ಬರಹಗಳ ಜಗತ್ತು ಒಂದು ಕಡೆಯಾದರೆ, ಸಂಶೋದನೆ, ಜಾನಪದ, ಸಂಪಾದನೆ ಹಾಗೂ ವೈಚಾರಿಕತೆಗೆ ಸಂಬಂಧಿಸಿದ ಸೃಜನೇತರ ಬರಹ ಇನ್ನೊಂದು ಕಡೆಯಲ್ಲಿ ಇವೆ. ಭಾರತೀಯ ಸಾಹಿತ್ಯ ಸಂಸ್ಕೃತಿಗೆ ಸಂಬಂಧಸಿದಿಂತೆ ಅವರು ಎತ್ತುವ ಸೂಕ್ಷ್ಮ ಪ್ರಶ್ನೆಗಳು ಈ ಪುಸ್ತಕವನ್ನು ಓದುವ ಸಹೃದಯರಿಗೆ ಗಂಭೀರ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದೆ. ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸವಿ ನೆನಪಿಗಾಗಿ ಕಂಬಾರರ ಸಾಹಿತ್ಯದ ಬಗ್ಗೆ ಬರೆದು ಪ್ರಕಟಿಸಬೇಕೆನ್ನುವ ಮಾಹದಾಸೆ ಡಾ. ವೀರೇಶ್ ಬಡಿಗೇರೆಯವರಿಗೆ ಇದ್ದಿತ್ತು. ಆದರೆ ಪ್ರಾರಂಭದ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲ ನಂತರ ಸಾಧ್ಯವಾಯಿತು ಎಂಬುವುದನ್ನು ತಮ್ಮ ಕೃತಿಯ ಮೂಲಕ ತಿಳಿಸಿದ್ದಾರೆ.

ನಾವು ಯಾವುದನ್ನು ಪಾಶ್ಚತ್ಯರಿಂದ ಹೊಸದೆಂದು ನಂಬಿ ತರುತ್ತೇವೆಯೋ ಅದು ನಮ್ಮಲ್ಲಿ ಇದೇ ಎನ್ನುವ ಅಭಿಪ್ರಾಯ ಕಂಬಾರರದಾಗಿತ್ತು. ಕನ್ನಡ ಸಾಂಸ್ಕೃತಿ ಕ ಪರಂಪರೆಯನ್ನು ಕಂಬಾರರು ಅನುಸಂದಾನ ಮಾಡುತ್ತಾರೆ. ಆ ಮೂಲಕ ಅಪಮಾನಿತವಾಗಿದ್ದ ಆತ್ಮಜ್ಞಾನ ಹಾಗು ದೇಶಿ ಅನುಭವಕ್ಕೆ ಆತ್ಮ ವಿಶ್ವಾಸ ತುಂಬುತ್ತಾರೆ.

ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ ಈ ಪ್ರಬಂಧವು ಕುವೆಂಪು ನಾಟಕಗಳ ಮೂಲಕ ಕನ್ನಡದ್ದೇ ಆದ ಒಂದು ರಂಗಕಲ್ಪನೆಯನ್ನು ಸೃಜಿಸಿಕೊಳ್ಳುಬಹುದೇ ಎಂಬ ಪ್ರಶ್ನೆಯನ್ನು ಕೇಂದ್ರದಲ್ಲಿಟ್ಟುಕೊಂಡು ತನ್ನ ಚರ್ಚೆಯನ್ನು ರೂಪಿಸುತ್ತದೆ. ಅಧ್ಯಯನದ ಪ್ರಮುಖ ಭಾಗವು ಈ ಕೇಂದ್ರ ಪ್ರಶ್ನೆಯ ಸುತ್ತ ತನ್ನ ಗ್ರಹಿಕೆಗಳನ್ನು ಕಟ್ಟುತ್ತದೆ. ಇದು ಕುವೆಂಪು ನಾಟಕಗಳನ್ನು ರಂಗ ಪರಿಭಾಷೆಗಳ ಮೂಲಕ ನೋಡುವ ವಿಶ್ಲೇಪಿಸುವ ಪ್ರಯತ್ನವಾಗಿದೆ. ಈ ಅಧ್ಯಯನದಲ್ಲಿ ಸಾಹಿತ್ಯ ವಿಮರ್ಶೆಯ ಅನೇಕ ಪರಿಕಲ್ಪನೆಗಳನ್ನು ಬಳಸಿಕೊಂಡರು. ನಾಟಕಗಳು ವಸ್ತುವಿನ ಕುರಿತ ಚರ್ಚೆ ಕಂಡು ಬಂದಿಲ್ಲ. ಲೇಖಕರು ತಿಳಿಸುವ ಹಾಗೆಯೇ ಈ ಅಧ್ಯಯನವು ನಾಟಕಗಳ ವಸ್ತುಗಿಂತಲೂ ಹೆಚ್ಚಾಗಿ ಅವುಗಳ ಸ್ವರೂಪದ ಕುರಿತ ಚರ್ಚೆಯನ್ನು ನಡೆಸಲು ಆಸಕ್ತವಾಗಿದೆ. ಅಧ್ಯಯನದ ವಿಧಾನದಲ್ಲಿ ತಿಳಿಸಿರುವಂತೆ ಲೇಖಕರು ಈ ನಾಟಕವನ್ನು ಅಧ್ಯಯನಕ್ಕೆ ಒಳಪಡಿಸುವಾಗ ರೂಪನಿಷ್ಠ ವಿಮರ್ಶಾ ಮಾರ್ಗದ ಮೂಲಕ ವಿಮರ್ಶಿಸಿದ್ದಾರೆ ರೂಪನಿಷ್ಠವಾದ ಎಂದರೆ ವಸ್ತುವನ್ನು ಹಿನ್ನೆಯಲ್ಲಿರಿಸಿ ಕೃತಿಯ ಸ್ವರೂಪವನ್ನು ಮುಟ್ಟುಗೊಳಿಸಿ ಚರ್ಚೆಸುವುದು. ಇಲ್ಲಿ ಲೇಖಕರು ಕೃತಿಯನ್ನು ಸಣ್ಣ ಸಣ್ಣ ಘಟಕಗಳನ್ನಾಗಿ ಒಡೆದು ನೋಡುವ ಮೂಲಕ ಕೃತಿಯನ್ನು ವಿಶ್ಲೇಷಣೆಗೆ ಮುಂದಾಗುತ್ತಾರೆ.

Downloads

Published

05.03.2024

How to Cite

PRITHVIRAJ B. (2024). ಕುವೆಂಪು ಮತ್ತು ಕಂಬಾರರ ನಾಟಕಗಳು ಮುಂದಿಡುವ ರಂಗಕಲ್ಪನೆ. AKSHARASURYA, 3(03), 111 to 121. Retrieved from https://aksharasurya.com/index.php/latest/article/view/333

Issue

Section

ಪುಸ್ತಕ ವಿಮರ್ಶೆ. | BOOK REVIEW.