ಮರಾಠಿ ದಲಿತ ಕಾವ್ಯ ನಡೆದುಬಂದ ದಾರಿ

Authors

  • ASHOKA N. S.

Keywords:

ಪೀಪಲ್ಸ್ ಎಜುಕೇಶನ್ ಸೊಸೈಟಿ, ಮಹಾರಾಷ್ಟ್ರ ದಲಿತ ಸಾಹಿತ್ಯ ಸಂಘ, ಮಹಾರಾಷ್ಟ್ರ ಬೌದ್ಧ ಸಾಹಿತ್ಯ ಸಭೆ, ಯಾಂಗ್ರಿಯಂಗ್ ಮ್ಯಾನ್, ರಿಪಬ್ಲಿಕನ್ ಪಕ್ಷ, ದಲಿತ ಪ್ಯಾಂಥರ್ಸ್

Abstract

ಪ್ರಸ್ತುತ ಸಂಶೋಧನಾ ಲೇಖನವು ಮರಾಠಿ ದಲಿತ ಕಾವ್ಯ ಬೆಳೆದುಬಂದ ಹಾದಿಯನ್ನು ಕುರಿತು ಚರ್ಚಿಸುತ್ತದೆ. ಮಹಾರಾಷ್ಟ್ರದಲ್ಲಿ ದಲಿತ ಸಾಹಿತ್ಯ ಹುಟ್ಟುಪಡೆಯಲು ದೊರೆತ ಸ್ಫೂರ್ತಿ ಹಾಗೂ ಪ್ರೇರಣೆಗಳ ಹುಡುಕಾಟದ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಮರಾಠಿ ದಲಿತ ಸಾಹಿತ್ಯ ಇಡೀ ಭಾರತೀಯ ಇತರೆ ಭಾಷೆಗಳ ದಲಿತ ಸಾಹಿತ್ಯಗಳಿಗಿಂತ ಹೆಚ್ಚು ಪ್ರಬಲವಾಗಿ ರೂಪುಗೊಳ್ಳಲು ಕಾರಣವಾದ ಐತಿಹಾಸಿಕ ಮೈಲಿಗಲ್ಲುಗಳನ್ನು ಗುರುತಿಸಲಾಗಿದೆ. ಮರಾಠಿ ದಲಿತ ಸಾಹಿತ್ಯ 1970 ರಿಂದೀಚೆಗೆ ಬಹಳಷ್ಟು ಪ್ರಚಲಿತಕ್ಕೆ ಬಂದಿದ್ದರೂ, ಅದರ ಮೂಲ ಬೇರುಗಳು ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿ ಬಾಪುಲೆ ಹಾಗೂ ಅಕ್ಷರದವ್ವ ಸಾವಿತ್ರಿ ಬಾಪುಲೆ ಅವರ ಚಳುವಳಿಗೆ ಹೋಗುತ್ತದೆ. ಮರಾಠಿ ದಲಿತ ಸಾಹಿತ್ಯಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹುದೊಡ್ಡ ನಿಧಿಯ ಆಗರವಾಗಿದ್ದರು. ಶೋಷಿತ ಸಮುದಾಯಗಳ ಪರವಾದ ಅವರ ವಿಚಾರಗಳು, ಚಿಂತನೆಗಳು ಹೇಗೆ ಇಡೀ ಭಾರತೀಯ ದಲಿತ ಸಾಹಿತ್ಯವನ್ನು ಬಹದೊಡ್ಡ ಮಟ್ಟದಲ್ಲಿ ಪ್ರಭಾವಿಸಿತ್ತು ಎಂಬುದರ ಶೋಧವನ್ನು ಇಲ್ಲಿ ಮಾಡಲಾಗಿದೆ. ಅಂಬೇಡ್ಕರ್ ಅವರು ‘ಪೀಪಲ್ಸ್ ಎಜುಕೇಶನ್ ಸೊಸೈಟಿ’ ಸ್ಥಾಪಿಸಿ, ಅವಕಾಶವಂಚಿತ ಶೋಷಿತ ಸಮುದಾಯಕ್ಕೆ ಉನ್ನತ ಶಿಕ್ಷಣವನ್ನು ತಲುಪಿಸುವ ನಿಟ್ಟಿನಲ್ಲಿ, ಮುಂಬೈಯಲ್ಲಿ ಸಿದ್ಧಾರ್ಥ ಕಾಲೇಜನ್ನು ಆರಂಭಿಸಿದರು. ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಈ ಮೂರು ಸೂತ್ರಗಳು ಮರಾಠಿಯಷ್ಟೆ ಅಲ್ಲದೇ ಇಡೀ ಭಾರತೀಯ ದಲಿತ ಸಾಹಿತ್ಯಕ್ಕೆ ನಾಂದಿ ಹಾಡಿದವು. ಈ ನಿಟ್ಟಿನಲ್ಲಿ ಹುಟ್ಟುಪಡೆದ ಅನೇಕ ಸಂಘಟನೆಗಳು, ಸಂಸ್ಥೆಗಳು ಮರಾಠಿ ದಲಿತ ಸಾಹಿತ್ಯಕ್ಕೆ ತಳಹದಿಯನ್ನು ಹಾಕಿದವು. ಈ ಹಿನ್ನೆಲೆಯಲ್ಲಿ ಅನೇಕ ಮರಾಠಿ ದಲಿತ ಸಾಹಿತಿಗಳು ಶೋಷಿತರ ದನಿಯಾಗಿ ಕಾವ್ಯವನ್ನೇ ತಮ್ಮ ಹತಾರವನ್ನಾಗಿ ಮಾಡಿಕೊಂಡದ್ದನ್ನು, ಹಲವು ಕವಿಗಳ ಕಾವ್ಯವನ್ನು ಉದಾಹರಿಸುತ್ತಾ ಪ್ರಸ್ತುತ ಸಂಶೋಧನಾ ಲೇಖನದಲ್ಲಿ ವಸ್ತುನಿಷ್ಠವಾಗಿ ಚರ್ಚಿಸಲಾಗಿದೆ.

Downloads

Published

05.03.2024

How to Cite

ASHOKA N. S. (2024). ಮರಾಠಿ ದಲಿತ ಕಾವ್ಯ ನಡೆದುಬಂದ ದಾರಿ. AKSHARASURYA, 3(03), 79 to 86. Retrieved from https://aksharasurya.com/index.php/latest/article/view/330

Issue

Section

ಸಂಶೋಧನಾ ಲೇಖನಗಳು. | RESEARCH ARTICLE.