ಸಮಾಜಮುಖಿ ಭಾವ ಪ್ರಜ್ಞೆಯ ಮಡಿವಾಳಪ್ಪನವರ ತತ್ವಪದಗಳು

Authors

  • SAIBANNA M.

Keywords:

ಮಡಿವಾಳಪ್ಪ, ಜನಮುಖಿ ಧೋರಣೆ, ಸಾಮಾಜಿಕ ಅಭಿವೃದ್ಧಿ, ಅಭಿವ್ಯಕ್ತಿ, ಸಾಹಿತ್ಯ, ತತ್ವಪದ

Abstract

ಪ್ರಸ್ತುತ ಸಮಕಾಲಿನ ಸಾಮಾಜಿಕ ಸಂದರ್ಭದಲ್ಲಿ ತತ್ವಪದಗಳು ಮತ್ತು ತತ್ವಪದಕಾರರ ತಾತ್ವಿಕತೆಯನ್ನು ಅಭಿವ್ಯಕ್ತಿಪಡಿಸುತ್ತದೆ. ಆಧುನಿಕರಣ, ಜಾಗತಿಕರಣ, ನಗರಿಕರಣದಲ್ಲಿ ಮಿಂದೆಳುತ್ತಿರುವ ಇಂದಿನ ಸಮಾಜವು ಮೌಲ್ಯಾಧಾರಿತ ವಾತಾವರಣವನ್ನು ಮೀರಿ ನಾಗರಿಕತೆಯೆನ್ನುವ ವೈಭೋಗದ ಬದುಕಿಗೆ ಅಂಟಿಕೊಂಡು, ಮೌಲ್ಯ, ಆದರ್ಶ, ನೈತಿಕತೆಯನ್ನು ಬರಿದಾಗಿಸಿಕೊಳ್ಳುತ್ತಿದೆ. ಮನುಷ್ಯ ಕಲ್ಯಾಣ, ಸದಾಶಯದ ಭಾವ ಇಂದಿನ ಯುವಸಮುದಾಯಗಳಲ್ಲಿ ಗಣನಿಯವಾಗಿ ಕುಸಿಯುತ್ತಿದೆ. ಪರಿಣಾಮವಾಗಿ ಸಮಾಜದಲ್ಲಿ ಸಮುದಾಯ ಮತ್ತು ವಿವಿಧ ಸಮೂಹಗಳು, ನೈತಿಕ ಮತ್ತು ಆಲಿಂಗನ ಮನೋಭಾವವನ್ನು ಬರಿದಾಗಿಸಿಕೊಳ್ಳುತ್ತಿವೆ. ಇಂತಹ ಕ್ಲಿಷ್ಟಕರವಾದ ಹಾದಿಯೆಡೆಗೆ ಸಾಗುತ್ತಿರುವ ಸಮಾಜವನ್ನು ನೈತಿಕತೆಯೆಡೆಗೆ ಕರೆತರಲು ತತ್ವಪದಗಳು ಅತ್ಯಂತ ಪರಿಣಾಮಕಾರಿ ಮತ್ತು ಕ್ರೀಯಾತ್ಮಕವಾಗಿ ಕೆಲಸ ಮಾಡಿವೆಯೆಂದು ನಿರ್ವಿವಾದವಾಗಿ ಹೇಳಬಹುದು. ಈ ದೆಸೆಯಲ್ಲಿ ಕಡಕೋಳ ಮಡಿವಾಳಪ್ಪನವರ ತತ್ವಪದಗಳು ಸಮಾಜದಲ್ಲಿ ವೈಚಾರಿಕತೆಯ ಕೂಗೆಬ್ಬಿಸಿ, ಸಮಾಜಕ್ಕೆ ಚಲನಾಶೀಲತೆಯೆಂಬ ಮೌಲಿಕತೆಯನ್ನು ತುಂಬಿ ಸಮಾಜದ ಪ್ರಗತಿಗೆ ಕಾರಣವಾಗಿವೆ. ಪ್ರಸ್ತುತ ಲೇಖನವು ತತ್ವಪದ ಸಾಹಿತ್ಯವನ್ನು ಕೇವಲ ಸಾಹಿತ್ಯಕ ಪರಿಧಿಯಿಂದ ಗ್ರಹಿಸದೆ, ಸಾಮಾಜಿಕ ಕಣ್ಣೋಟಗಳಿಂದ ನೋಡಬೇಕಾದ ಅಗತ್ಯತೆಯನ್ನು ಪ್ರತೀಪಾದಿಸುತ್ತದೆ. ಕಡಕೋಳ ಮಡಿವಾಳಪ್ಪನವರನ್ನು ಕೇವಲ ತತ್ವಪದಕಾರನಷ್ಟೆ ಅಲ್ಲ, ಅವರೊಬ್ಬ ಸಮಾಜದ ಬಗ್ಗೆ ಸದಾ ಚಿಂತಿಸುತಿದ್ದ ಸಾಮಾಜಿಕ ಸಹೃದಯಿಯಾಗಿದ್ದರು. ಹಾಗಾಗಿ ಅವರನ್ನು ಸಮಾಜವಿಜ್ಞಾನ ಅಧ್ಯಯನ ಶಿಸ್ತುಗಳು ಸಾಮಾಜಿಕ ಚಿಂತಕರನ್ನಾಗಿ ಪರಿಭಾವಿಸುವ ಅವಶ್ಯಕತೆಯಿದೆ. ಈ ನೆಲೆಯಲ್ಲಿ ಪ್ರಸ್ತುತ ಲೇಖನವು ಅವರ ತತ್ವಪದಗಳ ಸಾಮಾಜಿಕ ಕಾಳಜಿಯನ್ನು ಹೊರಹಾಕುತ್ತದೆ. ಸಮಾಜವನ್ನು ಆವರಿಸಿರುವ ಮೌಢ್ಯ, ಕಂದಾಚಾರ, ಅಗಣಿತ ಸಾಮಾಜಿಕ ವ್ಯಸನಗಳ ಕುರಿತು ಮಡಿವಾಳಪ್ಪನವರ ಸಾಹಿತ್ಯವು ಧ್ವನಿಯೆತ್ತಿದೆ. ಹೀಗೆ ಪ್ರಸ್ತುತ ಲೇಖನವು ಮಡಿವಾಳಪ್ಪನವರ ಸಾಹಿತ್ಯ ಒಳಗೊಂಡಿರುವ ಸಾಮಾಜಿಕ ನಿಲುವುಗಳನ್ನು ದಾಖಲಿಸುವ ಪ್ರಯತ್ನ ಮಾಡಿದೆ.

Downloads

Published

05.02.2024

How to Cite

SAIBANNA M. (2024). ಸಮಾಜಮುಖಿ ಭಾವ ಪ್ರಜ್ಞೆಯ ಮಡಿವಾಳಪ್ಪನವರ ತತ್ವಪದಗಳು. AKSHARASURYA, 3(02), 124 to 130. Retrieved from https://aksharasurya.com/index.php/latest/article/view/320

Issue

Section

ಪ್ರಬಂಧ. | ESSAY.